ಜ್ಞಾನ – ಭಕ್ತಿ – ಕರ್ಮಗಳ ತ್ರಿವೇಣೀ ಸಂಗಮ : ಸಾನೆ ಗುರೂಜಿ

ಗಂಗಾ, ಯಮುನಾ, ಸರಸ್ವತೀ ನದಿಗಳ ಸಂಗಮವು ಅತ್ಯಂತ ಪವಿತ್ರವಾದುದೆಂದು ಮನ್ನಣೆ ಪಡೆದಿದೆ. ಈ ತ್ರಿವೇಣೀ ಸಂಗಮವು ಜ್ಞಾನ – ಭಕ್ತಿ – ಕರ್ಮಗಳನ್ನು ಸಂಕೇತಿಸುತ್ತವೆ ಎಂದು ಸಾನೆ ಗುರೂಜಿ ಹೀಗೆ ವಿವರಿಸುತ್ತಾರೆ…. ನದಿಗಳ ಸಂಗಮವು ಶ್ರೇಷ್ಠವಾದದ್ದು, ಪವಿತ್ರವಾದದ್ದು. ಅದ್ವೈತದ ಅನುಭಾವವನ್ನು ಪಡೆದ ಇಬ್ಬರು ಸಂತರ ಭೇಟಿ ಅದೆಷ್ಟು ಅದ್ಭುತವಾಗಿರುತ್ತದೆ ಊಹಿಸಿ! ವಸಿಷ್ಠ – ವಾಮದೇವರ ಭೇಟಿಯಂತೆ, ಗಾಂಧೀಜಿ – ರವೀಂದ್ರರ ಭೇಟಿಯಂತೆ… ಅದೊಂದು ಮಹಾಕಾವ್ಯವೇ ಸರಿ. ಹಾಗೆಯೇ ನದಿಗಳ ಸಂಗಮ ಕೂಡಾ. ಅಥವಾ ನದಿಗಳ ಸಂಗಮದಂತೆಯೇ ಮಹಾತ್ಮರ […]

ಜ್ಞಾನದ ಮುಳ್ಳನ್ನೂ ಎಸೆದುಬಿಡಿ! : ರಾಮಕೃಷ್ಣ ವಚನವೇದ

“ಅಜ್ಞಾನವೆಂಬ ಮುಳ್ಳನ್ನು ಜ್ಞಾನದ ಮುಳ್ಳಿನಿಂದ ತೆಗೆದುಬಿಡಿ. ಅನಂತರ ಅಜ್ಞಾನದ ಮುಳ್ಳಿನೊಡನೆ ಜ್ಞಾನದ ಮುಳ್ಳನ್ನೂ ಬಿಸಾಡಿಬಿಡಿ” ಅನ್ನುತ್ತಾರೆ ರಾಮಕೃಷ್ಣ ಪರಮಹಂಸ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಅನ್ನುವುದು ಸಾಮಾನ್ಯ ಜ್ಞಾನ. ಅಜ್ಞಾನವೊಂದು ಮುಳ್ಳಾದರೆ, ಅದನ್ನು ತೆಗೆಯುವ ಜ್ಞಾನವೂ ಮುಳ್ಳೇ. ಏಕೆಂದರೆ, ಅಜ್ಞಾನದಂತೆ, ಜ್ಞಾನವೂ ಒಂದು ಹಂತದಲ್ಲಿ ನಮ್ಮನ್ನು ಬಾಧಿಸುತ್ತದೆ. ಜ್ಞಾನವು ಹದ ತಪ್ಪಿದರೆ ಅಹಂಕಾರಕ್ಕೆ ತಿರುಗುತ್ತದೆ. ಅಹಂಕಾರ ಪುನಃ ನಮ್ಮನ್ನು ಅಜ್ಞಾನದ ಸ್ಥಿತಿಗೆ ಹಿಂತಿರುಗಿಸುತ್ತದೆ.  ಆದ್ದರಿಂದ, ಅಜ್ಞಾನದ ಮುಳ್ಳನ್ನು ತೆಗೆದುಹಾಕಲು ಜ್ಞಾನದ ಮುಳ್ಳನ್ನು ಬಳಸಬೇಕು. ಅನಂತರ ಅವೆರಡನ್ನೂ ಒಟ್ಟಿಗೇ ಅವಗಣಿಸಿ, […]

ಎರಡು ಬಗೆಯ ಅಜ್ಞಾನಿಗಳು : ಶಿವೋsಹಂ ಸರಣಿ

ನಿಮ್ಮನ್ನು ಹೊಗಳುವಾಗ, ನಿಮ್ಮ ಗುಣಗಾನ ಮಾಡುವಾಗ, ನಿಮ್ಮನ್ನು ಮೆಚ್ಚಿಕೊಳ್ಳುವಾಗ ನೀವು ಅವೆಲ್ಲವೂ ನಿಮ್ಮ ದೇಹದ ಕಾರಣದಿಂದ ಅಂದುಕೊಳ್ಳುತ್ತೀರಿ. ಅದು ನಿಜವೇ ಆಗಿದ್ದಲ್ಲಿ ಚೇತನಾಶೂನ್ಯವಾದ ದೇಹವನ್ನು ನಿಮ್ಮ ಪ್ರೀತಿಪಾತ್ರರು ಅದೇಕೆ ಧಾವಂತದಲ್ಲಿ ವಿಸರ್ಜನೆ ಮಾಡಲು ಮುಂದಾಗುವರು? ನೀವೇ ಯೋಚಿಸಿ…. ~ Whosoever Ji ಜಗತ್ತಿನಲ್ಲಿ ಎರಡು ಬಗೆಯ ಅಜ್ಞಾನಿಗಳಿರುತ್ತಾರೆ. ಓದು ಬರಹ ಕಲಿತ ಅಜ್ಞಾನಿಗಳು ಮತ್ತು ಅನಕ್ಷರಸ್ಥ ಅಜ್ಞಾನಿಗಳು. ವಾಸ್ತವದಲ್ಲಿ ಓದು ಬರಹ ಕಲಿತವರ ಅಜ್ಞಾನವು ಅನಕ್ಷರಸ್ಥರ ಅಜ್ಞಾನಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುತ್ತದೆ! ಎಲ್ಲಿಯವರೆಗೆ ಕೇವಲ ಮಾಹಿತಿ ಹಾಗೂ ಸೂಚನೆಗಳನ್ನೆ ಜ್ಞಾನವೆಂದು […]

ಸವಲತ್ತು ಕಸಿಯಬಹುದು, ಗುಣ – ಜ್ಞಾನ ಕಸಿಯಲಾಗದು : ನೀತಿಶತಕ

ಅಂಭೋಜಿನೀ ವನವಿಹಾರವಿಲಾಸಮೇವ ಹಂಸಸ್ಯ ಹಂತಿ ನಿತರಾಂ ಕುಪಿತೋ ವಿಧಾತಾ | ನ ತ್ವಸ್ಯ ದುಗ್ಧಜಲಭೇದವಿಧೌ ಪ್ರಸಿದ್ಧಾಂ ವೈದಗ್ಧ್ಯಕೀರ್ತಿಮಪಹರ್ತುಮಸೌ ಸಮರ್ಥಃ|| ನೀತಿ ಶತಕ 14|| ಒಬ್ಬ ರಾಜನಿಗೆ ಅಥವಾ  ಶ್ರೀಮಂತನಿಗೆ ಒಬ್ಬ ವಿದ್ವಾಂಸನನ್ನು ನಿಯಂತ್ರಿಸಬೇಕು ಎಂಬ ದುಷ್ಟಬುದ್ಧಿ ಬಂದರೆ; ಆ ರಾಜ ಏನು ಮಾಡಬಹುದು, ಏನು ಮಾಡಲಾಗದು ಅನ್ನುವುದನ್ನು ಒಂದು ಸುಂದರ ದೃಷ್ಟಾಂತದ ಮೂಲಕ ಭರ್ತೃಹರಿ ಇಲ್ಲಿ ವಿವರಿಸಿದ್ದಾನೆ. ಒಂದು ಹಂಸ ಇದೆ ಅಂದುಕೊಳ್ಳೋಣ.  ಚತುರ್ಮುಖ ಬ್ರಹ್ಮನಿಗೆ ಆ ಹಂಸದ ಮೇಲೆ ಸಿಟ್ಟು ಬಂದಿದೆ ಅಂತ ಭಾವಿಸೋಣ… ಆಗ […]

ಅಹಂಕಾರ ಶಕ್ತಿಯಲ್ಲ, ಅದೊಂದು ಅವಸ್ಥೆ : ಓಶೋ ವಿಚಾರ

ಅಹಂಕಾರ ಶಕ್ತಿಯಲ್ಲ. ಅದು ಆತ್ಮವನ್ನು ಕವಿದಿರುವ ಅಜ್ಞಾನರೂಪಿಯಾದ ಒಂದು ಪರದೆಯಾಗಿದೆ. ಈ ಅಜ್ಞಾನವು ಹಲವಕ್ಕೆ ಜನ್ಮ ನೀಡಬಲ್ಲದು. ಆ ಹಲವನ್ನು ವಿನಾಶಾತ್ಮಕ ದಾರಿಗಳಲ್ಲಿ ಉಪಯೋಗಿಸಿದಾಗ ಅಹಂಕಾರವು ಇನ್ನೂ ಸಬಲಗೊಳ್ಳುವುದು | ಓಶೋ ರಜನೀಶ್ ಕಾಮ ಕ್ರೋಧಾದಿ ಶಕ್ತಿಗಳನ್ನು ಕೂಡಾ ಸೃಜನಾತ್ಮಕವಾಗಿ ಪರಿವರ್ತಿಸಿಕೊಳ್ಳಬಹುದು. ಆದರೆ ಅಹಂಕಾರವನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳಲಾಗದು. ಕಾಮ ಕ್ರೋಧಾದಿಗಳು ಆಗೊಮ್ಮೆ, ಈಗೊಮ್ಮೆ ಹುಟ್ಟಿ ಸತ್ತರೆ ಅಹಂಕಾರ ಸದಾಕಾಲ ನಮ್ಮೊಂದಿಗೇ ಇರುವುದು. ಸಮಾಧಿಯ ಅನುಭವವುಂಟಾಗುವವರೆಗೂ ಅಹಂಕಾರಕ್ಕೆ ಸಾವಿಲ್ಲ. ಆದ್ದರಿಂದ ಅಹಂಕಾರ ನಮಗೆ ಶಕ್ತಿಯಲ್ಲ, ಅದು ನಮ್ಮ ಅವಸ್ಥೆ. […]

ತಿಳಿವು ಪಡೆದ ಮೇಲೆ ಪರಿಕರದ ಹಂಗೇಕೆ? : ಬೆಳಗಿನ ಹೊಳಹು

ಪರಿಕರಗಳೇ ಜ್ಞಾನವಲ್ಲ. ಅವನ್ನು ಬಳಸಿ, ಜ್ಞಾನವನ್ನು ಹೊಂದಿದ ಮೇಲೂ ಪರಿಕರಗಳಿಗೆ ಜೋತುಬೀಳಬಾರದು. ಅದನ್ನು ಬಿಟ್ಟು ಮುನ್ನಡೆಯಬೇಕು.  ಗ್ರಂಥಾನಭ್ಯಸ್ಯ ಮೇಧಾವೀ ಜ್ಞಾನವಿಜ್ಞಾನತತ್ಪರಃ ಪಲಾಲಮಿವ ಧಾನ್ಯಾರ್ಥೀ ತ್ಯಜೇತ್ಸರ್ವಮಶೇಷತಃ || ಸುಭಾಷಿತ || “ಗ್ರಂಥಗಳನ್ನು ಓದಿ ಜ್ಞಾನಿಯಾಗುವ ಅಭ್ಯಾಸಿಯು, ಅಧ್ಯಯನದ ನಂತರ ಅವುಗಳ ಹಂಗಿನಿಂದ ಹೊರಗೆ ಬರಬೇಕು. ಧಾನ್ಯವನ್ನು ಪಡೆಯಲಿಚ್ಛಿಸುವವನು ಉಳಿದೆಲ್ಲವನ್ನೂ ತೂರಿ, ಕಾಳುಗಳನ್ನು ಮಾತ್ರ ಇಟ್ಟುಕೊಳ್ಳುವಂತೆ, ಜ್ಞಾನವನ್ನು ಮಾತ್ರ ತನ್ನಲ್ಲಿ ಇರಿಸಿಕೊಳ್ಳಬೇಕು” ಎನ್ನುತ್ತದೆ ಒಂದು ಸುಭಾಷಿತ.  ನಾವು ಸಾಮಾನ್ಯವಾಗಿ ಪರಿಕರಗಳ ಮೇಲೆ ಮೋಹ ಬೆಳೆಸಿಕೊಂಡುಬಿಡುತ್ತೇವೆ. ಬೋಧೆಗಿಂತ ಬೋಧಕರ ಮೇಲೆ, ಅರಿವಿಗಿಂತ […]

ಭಾರತವೆಂದರೆ ಬೆಳಕಿನ ಹುಡುಕಾಟ; ಬನ್ನಿ, ಜ್ಞಾನ ದೀವಿಗೆ ಹೊತ್ತಿಸಿಕೊಳ್ಳೋಣ!

ನಮ್ಮ ಪೂರ್ವಜರು ಹಣತೆಯಂತೆ ಹೊತ್ತಿಸಿಟ್ಟ ಜ್ಞಾನ, ಬಿಟ್ಟ ಕಣ್ಣಲ್ಲೆ ಜಗತ್ತಿನ ಪರಿಚಯ ಮಾಡಿಸುವ ತಂತ್ರಜ್ಞಾನವಲ್ಲ ನಿಜ…  ಆದರೆ, ಈ ಜ್ಞಾನ ಕಣ್ಣು ಮುಚ್ಚಿ ಜಗತ್ತನ್ನು ಅರಿಯುವಂತೆ ಮಾಡುವ ದಿವ್ಯಜ್ಞಾನ. ಮತ್ತು; ಅದು ಕಾಣಿಸುವ ಈ ಜಗತ್ತು, ಅಂತರಂಗದ ಜಗತ್ತು…. ~ ಗಾಯತ್ರಿ ಭಾರತಕ್ಕೂ ಬೆಳಕಿಗೂ ಎಡೆಬಿಡದ ನಂಟು. `ಭಾ’ ಅಂದರೆ `ಬೆಳಕು’. ಭಾರತ ಪದದ ಅರ್ಥ- ಬೆಳಕಿನ ಹುಡುಕಾಟದಲ್ಲಿ ನಿರತರಾದವರು ಎಂದು. ಹೀಗಾಗಿ ದೀಪಾವಳಿ ಕೇವಲ ಬಾಹ್ಯ ಆಚರಣೆಗಳ ನಿಟ್ಟಿನಿಂದಷ್ಟೇ ಅಲ್ಲ, ಆಂತರಿಕ ಕಾರಣಗಳಿಗಾಗಿಯೂ ಮಹತ್ವ ಪಡೆದಿದೆ. […]

ಜ್ಞಾನ, ಧ್ಯಾನ, ಸ್ನಾನ ಮತ್ತು ಶೌಚದ ಕುರಿತು : ಮೈತ್ರೇಯಿ ಉಪನಿಷತ್

ಅಭೇದದರ್ಶನಮ್ ಜ್ಞಾನಮ್ ಧ್ಯಾನಮ್ ನಿರ್ವಿಷಯಮ್ ಮನಃ | ಸ್ನಾನಮ್ ಮನೋಮಲತ್ಯಾಗಃ ಶೌಚಮ್ ಇಂದ್ರಿಯನಿಗ್ರಹಃ   || ಮೈತ್ರೇಯೀ ಉಪನಿಷತ್ | 3.2 || ಅರ್ಥ: ಜೀವ ಮತ್ತು ಬ್ರಹ್ಮ ಒಂದು ಎಂದು ತಿಳಿಯುವುದೇ ಜ್ಞಾನವು, ಮನಸ್ಸನ್ನು ವಿಷಯಗಳಿಂದ ದೂರವಿಡುವದೇ ಧ್ಯಾನವು. ಮನಸ್ಸಿನ ಕಲ್ಮಷಗಳನ್ನು ನಾಶಮಾಡುವುದೇ ಸ್ನಾನವು. ಇಂದ್ರಿಯಗಳನ್ನು ನಿಯಂತ್ರಣದಲ್ಲಿ ಇಡುವುದೇ ಶೌಚವು. ತಾತ್ಪರ್ಯ : ಜೀವ – ಬ್ರಹ್ಮರನ್ನು ಪ್ರತ್ಯೇಕ ನೋಡುವುದು ಅಜ್ಞಾನ. ಇದರಿಂದ ಭೇದಬುದ್ಧಿ ಹುಟ್ಟುತ್ತದೆ. ಮನಸ್ಸಿನಲ್ಲಿ ಐಹಿಕ ಸಂಗತಿಗಳ ಬಗ್ಗೆ ಯೋಚಿಸುತ್ತಲೇ ಇದ್ದರೆ ನಮಗೆ ಏಕಾಗ್ರತೆ […]

ಪ್ರತಿಯೊಂದು ಜೀವಪರ ತಿಳಿವೂ ಒಟ್ಟು ಮನುಷ್ಯರ ಕೊಡುಗೆ : ಬೆಳಗಿನ ಹೊಳಹು

“ಜ್ಞಾನ ಮಾನವೀಯತೆಗೆ ಸೇರಿದ್ದು. ಅದು ಯಾವುದೇ ದೇಶ – ಧರ್ಮಗಳಿಗೆ ಸೇರಿದ್ದಲ್ಲ…. “ ಜ್ಞಾನಕ್ಕೆ ಗಡಿಗಳಿಲ್ಲ. ಅದು ಯಾವುದೇ ಸಂಪ್ರದಾಯ ಅಥವಾ ಪರಂಪರೆಗೆ ಒಳಪಡುವುದಿಲ್ಲ. ಸೃಷ್ಟಿಯಲ್ಲಿ ಸುಪ್ತವಾಗಿರುವ ತಿಳಿವನ್ನು ಕಂಡುಕೊಳ್ಳುವುದು ಜ್ಞಾನ. ಅದನ್ನು ಭೂಮಿಯ ಮೇಲಿನ ಯಾವ ಭಾಗದಲ್ಲಿ ನೆಲೆಸಿರುವ ಮನುಷ್ಯನೂ ಸಾಧಿಸಬಲ್ಲ. ತಾನು ಪಡೆದ ಜ್ಞಾನವನ್ನು ನಿರೂಪಿಸಿ ಅಥವಾ ಅನ್ವಯಗೊಳಿಸಿ ವಿತರಿಸುವುದು ವಿಜ್ಞಾನ. ಜ್ಞಾನ ವಿಜ್ಞಾನಗಳು ಇಡಿಯ ಮನುಕುಲದ ಆಸ್ತಿ.  ಆದ್ದರಿಂದ “ಇದು ನಮ್ಮದು” ಎಂದು ಬೀಗುವುದಾಗಲೀ “ಇದು ನಮ್ಮದು ಮಾತ್ರ” ಎಂದು ಮುದ್ರೆಯೊತ್ತುವುದಾಗಲೀ ಸರಿಯಲ್ಲ. […]

ಮಧುರ ಭಕ್ತಿಯ ಅಸೀಮ ಶಕ್ತಿ

ಭಕ್ತಿ ಒಂದು ವಿಶಿಷ್ಟ ಭಾವ ವಿಶೇಷ. ಅದು ಶ್ರದ್ಧೆ, ಬದ್ಧತೆಗಳ ಮೇಲೆ ಪ್ರಕಟಗೊಳ್ಳುತ್ತದೆ. ಅಲ್ಲಿ ತರ್ಕಕ್ಕೆ, ವಿಚಾರಕ್ಕೆ ಆಸ್ಪದವಿಲ್ಲ. ಹಾಗೆಂದೇ ಕೂದಲೆಳೆಯ ದೋಷ ಉಂಟಾದರೂ ಭಕ್ತಿಯು ಭಯೋತ್ಪಾದಕವಾಗುತ್ತದೆ. ಈ ಭಕ್ತಿಗೆ ಪ್ರೇಮವನ್ನು ಬೆರೆಸಿದರೆ ಉಂಟಾಗುವ ಮಾಧುರ್ಯ ನಮ್ಮನ್ನು ಕರ್ಮಠತೆಯಿಂದ ಹೊರತಂದು ಸಲಹುತ್ತದೆ ~ ಸಾ.ಹಿರಣ್ಮಯಿ ಬಹುಶಃ ಮಾನವ ತನ್ನ ಬದುಕನ್ನು ಸಹ್ಯವೂ ಸುಂದರವೂ ಆಗಿಸಿಕೊಳ್ಳಲು ಕಂಡುಕೊಂಡ ಮಾರ್ಗಗಳಲ್ಲೇ ಅತ್ಯುನ್ನತವಾದದ್ದು ಪ್ರೇಮ. ಇದರ ನಂತರದಲ್ಲಿ ಬರುವುದು ‘ಭಕ್ತಿ’. ಜಗತ್ತನ್ನು ಬೆಸೆಯಬಲ್ಲ ಕೊಂಡಿಗಳೇನಾದರೂ ಇದ್ದರೆ ಅವು ಪ್ರೇಮ ಮತ್ತು ಭಕ್ತಿಗಳಷ್ಟೆ. ಇವು ಅತ್ಯಂತ […]