ಋಷಿ ಪರಂಪರೆ: ಸತ್ಯದ ಬೆಳಕುಂಡು ಬೆಳಗಿದ ಸಾಧಕರು

ವೇದಮಂತ್ರಗಳಲ್ಲಿ ಮಂತ್ರ ರಚಯಿತರಾಗಿ ಉಲ್ಲೇಖಗೊಂಡಿರುವ ಈ ಋಷಿಗಳೆಂದರೆ ಯಾರು? ಋಷಿ ಶಬ್ದದ ಅರ್ಥವೇನು? ಅರಿಯುವ ಕಿರು ಪ್ರಯತ್ನ ಇಲ್ಲಿದೆ… ~ ಗಾಯತ್ರಿ  ಋಗ್ವೇದದಲ್ಲಿ  ಋಷಿಗಳನ್ನು ಕುರಿತು ವ್ಯಾಖ್ಯಾನಿಸುತ್ತಾ, ‘ಜಗದ ಪರಿವೆಯೇ ಇಲ್ಲದೇ, ಜಗದೀಶನನ್ನು ಧ್ಯಾನಿಸಿ ಅಂತಃ ಪ್ರಕಾಶವನ್ನು ಬೆಳಗಿಸಿದವನು, ಸಾಮಾನ್ಯವಾಗಿ ಮನುಷ್ಯನಿಗೆ ನಿಲುಕದ ಅದಮ್ಯವಾದ ದಿವ್ಯಾನುಭೂತಿಯನ್ನು ಸಾಕ್ಷಾತ್ಕರಿಸಿಕೊಂಡವನು, ಜಗತ್ತಿನ ಸತ್ಯ ವಸ್ತುವನ್ನು ತನ್ನ ಸ್ವಂತ ಅರಿವಿಗೆ ತರಿಸಿಕೊಂಡವನು (ಸ್ವತಃ ಪ್ರಮಾಣ), ಅಂತಹ ಸತ್ಯದ ಸಾಕ್ಷಾತ್ಕಾರವನ್ನು ಭಗವಂತನಿಂದ ನೇರವಾಗಿ ಪಡೆದುಕೊಂಡವನು ಋಷಿ ಎನ್ನಿಸಿಕೊಳ್ಳುತ್ತಾನೆ’ ಎಂದು ವಿವರಿಸಲಾಗಿದೆ. ಯಜುರ್ವೇದದಲ್ಲಿ ‘ಹಿಂದಿನ ಕಾಲದಲ್ಲಿ ಯಾರು ಗುರುಕುಲದಲ್ಲಿ […]

ಸಂತರ ಜಾತಿಯ ಕೇಳಬೇಡ, ಅವರ ಜ್ಞಾನವನು ನೋಡು!

ಮಾಂಸದಂಗಡಿಯ ಹೆಣ್ಣಿನಿಂದ ಆತ್ಮಬೋಧೆ ಪಡೆದ ಕೌಶಿಕ ಎಂಬ ಋಷಿಯೊಬ್ಬನ ಕಥೆ ನಮ್ಮ ಪ್ರಾಚೀನ ಸಾಹಿತ್ಯದಲ್ಲಿ  ಬರುತ್ತದೆ. ಝೆನ್ ಬುದ್ಧಿಸಮ್ ನಲ್ಲಿ ಜನಪ್ರಿಯವಾದ `ಸರಹ’ನ ಕಥೆಯೂ ಇಂಥದ್ದೇ. ಇಲ್ಲಿ ಋಷಿ ಕುಮಾರನೊಬ್ಬನು ಬಾಣದ ಮೊನೆ ತಯಾರಿಸುವ ಹೆಣ್ಣಿನಿಂದ ಬೋಧೆ ಪಡೆಯುತ್ತಾನೆ. ಶಂಕರಾಚಾರ್ಯರು ಚಾಂಡಾಲನಿಂದ ತಾವೇ ಪ್ರತಿಪಾದಿಸುತ್ತಿದ್ದ ಅದ್ವೈತ ತತ್ತ್ವದ ಅನ್ವಯವನ್ನು ಅರಿಯುತ್ತಾರೆ. ನಮ್ಮ ಪರಂಪರೆಯುದ್ದಕ್ಕೂ ಇಂಥಾ ಅಸಂಖ್ಯಾತ ಸಂತರ ಉದಾಹರಣೆಗಳನ್ನು ನಾವು ಕಾಣುತ್ತೇವೆ. ~ ಸಾ.ಹಿರಣ್ಮಯಿ ಬಹುಶಃ ಜಾತಿಯ ವಿಷಯದಲ್ಲಿ ನಡೆಯುವಷ್ಟು ಜಿಜ್ಞಾಸೆ ನಮ್ಮ ದೇಶದಲ್ಲಿ ಇನ್ಯಾವುದರ ಕುರಿತೂ […]

ಪ್ರಜಾಪತಿಗಳು ಮತ್ತು ಸಂತಾನ : ಪುರಾಣಗಳಲ್ಲಿ ವಂಶಾವಳಿ | ಸನಾತನ ಸಾಹಿತ್ಯ ~ ಮೂಲಪಾಠಗಳು #39

ಪೌರಾಣಿಕ ಪಠ್ಯಗಳಲ್ಲಿ ದಾಖಲಾಗಿರುವಂತೆ ಸನಾತನ ಪರಂಪರೆಯ ವಂಶಾವಳಿಯನ್ನು ಇಲ್ಲಿ ನೀಡಲಾಗಿದೆ. ಇದು ಈ ಸರಣಿಯ 2ನೇ ಭಾಗ. ಮಾಹಿತಿ ಕೃಪೆ : WWW.VYASAONLINE.COM ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/11/12/sanatana/ ಪುತ್ರರಲ್ಲಿ ಮತ್ತು ಪುತ್ರವಂತರಲ್ಲಿ ಶ್ರೇಷ್ಠ ಭಗವಾನ್ ಋಷಿ ದಕ್ಷನು ಬ್ರಹ್ಮನ ಎಡ ಅಂಗುಷ್ಠದಿಂದ ಜನಿಸಿದನು. ಆ ಮಹಾತ್ಮನ ಭಾರ್ಯೆಯು ಬಲ ಅಂಗುಷ್ಠದಿಂದ ಹುಟ್ಟಿದಳು. ಆ ಮುನಿಯು ಅವಳಿಂದ ಐವತ್ತು ಕನ್ಯೆಯರನ್ನು ಪಡೆದನು. ಆ ಎಲ್ಲ ಕನ್ಯೆಯರೂ ಅನವದ್ಯಾಂಗಿಯರೂ, ಕಮಲಲೋಚನೆಯರೂ ಆಗಿದ್ದರು. ಪುತ್ರಹೀನನಾಗಿದ್ದ ಪ್ರಜಾಪತಿಯು ಅವರನ್ನೇ ಪುತ್ರಿಕರನ್ನಾಗಿರಿಸಿಕೊಂಡನು. […]

ಪ್ರೇಮಪೂರ್ಣ ಮನಸ್ಸೇ ಧಾರ್ಮಿಕ ಮನಸ್ಸು : ಅರಳಿಮರ POSTER

“ಸತ್ಯಕ್ಕೆ ದಾರಿಗಳಿಲ್ಲ. ಯಾವ ಪೂರ್ವನಿಶ್ಚಿತ ದಾರಿಯಿಂದಲೂ ಸತ್ಯದ ನೆಲೆ ತಲುಪಲು ಸಾಧ್ಯವಿಲ್ಲ. ಗುಡಿ, ಮಂದಿರಗಳಿಗೆ ಹೋಗುವುದು, ಗ್ರಂಥಗಳ ಶುಷ್ಕ ಪಠಣ, ಸಂಪ್ರದಾಯಗಳ ಅಂಧಾನುಕರಣೆ – ಈ ಯಾವುದೂ ಧಾರ್ಮಿಕತೆಯ ಲಕ್ಷಣಗಳಲ್ಲ. ದುಷ್ಟ ಆಲೋಚನೆಗಳಿಲ್ಲದ, ಪ್ರೇಮಪೂರ್ಣ ಮನಸ್ಸನ್ನು ಹೊಂದಿರುವುದೇ ನಿಜವಾದ ಧಾರ್ಮಿಕತೆ” ಎನ್ನುತ್ತಾರೆ ಜಿಡ್ಡು ಕೃಷ್ಣಮೂರ್ತಿ.  ಯಾರೋ ಹೇಳಿದ ದಾರಿಯಲ್ಲಿ ನಡೆದು ನಾವು ಧರ್ಮವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಧರ್ಮ ಸ್ವಯಂಧಾರಣೆ. ನಾವು ಏನನ್ನು ಧರಿಸುತ್ತೇವೋ ಅದು ಧರ್ಮ. ಇನ್ಯಾರೋ ಕಂಡುಕೊಂಡ ದಾರಿ ಅವರ ಧರ್ಮ, ಅವರ ಧಾರಣೆ. ಮೌಢ್ಯತೆಯನ್ನು. […]

ಸಂಪ್ರದಾಯವೊಂದು ಅವನತಿಯ ಹಾದಿ ಹಿಡಿದಾಗ…

ಮೂಲ: ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಸಂಪ್ರದಾಯವೊಂದು ಅವನತಿಯ ಹಾದಿ ಹಿಡಿದಾಗ ಕರುಣೆ ಮತ್ತು ನೈತಿಕತೆ ಹುಟ್ಟಿಕೊಳ್ಳುತ್ತವೆ. ಕಲಿಕೆ ಮತ್ತು ಜಾಗರೂಕತೆ ಮೇರೆ ಮೀರುತ್ತಿದ್ದಂತೆಯೇ ಬೂಟಾಟಿಕೆ ಹುಟ್ಟಿಕೊಳ್ಳುತ್ತದೆ. ಒಡೆದ ಮನೆಯಲ್ಲಿ ಮಕ್ಕಳು ಮತ್ತು ತಂದೆ ತಾಯಂದಿರು ಕರ್ತವ್ಯಪರಾಯಣರು. ಛಿದ್ರಗೊಂಡ ಸಮಾಜದ ತುಂಬ ನಂಬಿಕಸ್ತ ಭಕ್ತರ ಮೆರವಣಿಗೆ, ಉರವಣಿಗೆ.

ಬಾವುಲ್ : ಭಕ್ತಿಯಲಿ ಉನ್ಮತ್ತ ಪರಂಪರೆ

ಬಾವುಲ್ ಪಂಗಡ ಅತ್ಯಂತ ಸಂಕೀರ್ಣವಾದುದು. ಇಲ್ಲಿ ಹಲವು ಮೂಲಗಳಿಂದ ಬಂದು ಸೇರಿದ ಜನರಿದ್ದಾರೆ. ತಲೆಮಾರುಗಳ ಹಿಂದೆ ಬಾವುಲ್‍ಪಂಥದತ್ತ ಆಕರ್ಷಿತರಾಗಿ ಬಂದ ಬೇರೆ ಬೇರೆ ಜಾತಿ ಮತಗಳವರು ಸೇರಿ ಈ ವಿಶಿಷ್ಟವಾದ ಪಂಗಡ ಬೆಳೆದುಕೊಂಡಿದೆ. ಇವರ ಸಂಖ್ಯೆ ಬಹಳ ಕಡಿಮೆ ಇರುವುದಾದರೂ ಬಂಗಾಳ ಪ್ರಾಂತ್ಯದಲ್ಲಿ ಬಾವುಲ್‍ಗಳು ಬೀರಿರುವ ಪರಿಣಾಮ ಗಣನೀಯವಾದುದು ~ ಚೇತನಾ ತೀರ್ಥಹಳ್ಳಿ   ಬಾವುಲ್‍ಗಳು ಅಪ್ಪಟ ಮಣ್ಣಿನ ಮಕ್ಕಳು. ದೇಸೀತನ ಇವರಲ್ಲಿ ನೂರಕ್ಕೆ ನೂರು ಮೇಳೈಸಿರುತ್ತದೆ. ಅವರ ನಡೆ ನುಡಿಗಳೆಲ್ಲವೂ ಅತ್ಯಂತ ಪ್ರಾಮಾಣಿಕ, ನೇರ ಮತ್ತು […]

ಝೆನ್ ಪರಂಪರೆ : ಒಂದು ಕಿರು ಪರಿಚಯ

ಝೆನ್, ಸೂಫಿ, ಅವಧೂತ ಹಾಗೂ ಬೌದ್ಧ ಪರಂಪರೆಗಳ ಕುರಿತು ಪರಿಚಯ ಲೇಖನಗಳನ್ನು ಬರೆಯುವಂತೆ ನಮ್ಮ ಓದುಗರು  ಕೇಳಿದ್ದಾರೆ. ಕಾಲಕ್ರಮದಲ್ಲಿ ಈ ಎಲ್ಲವುಗಳ ಕುರಿತು ಲೇಖನಗಳನ್ನು ಪ್ರಕಟಿಸುವ ಪ್ರಯತ್ನ ಮಾಡುತ್ತೇವೆ. ಮೊದಲನೆಯದಾಗಿ ಝೆನ್ ಪರಂಪರೆ ಕುರಿತ ಲೇಖನ ಇಲ್ಲಿದೆ. ಇದು ಝೆನ್ ತಿಳಿವಿಗೆ ಪ್ರವೇಶಿಕೆಯಷ್ಟೇ. ಮುಂದಿನ ದಿನಗಳಲ್ಲಿ ಇತರ ಆಯಾಮಗಳನ್ನು ಪ್ರಕಟಿಸುವ ಪ್ರಯತ್ನ ಮಾಡಲಾಗುವುದು ~ ಅರಳಿ ಬಳಗ ಝೆನ್ ಅಂದರೆ ಅರಿವು. ಇದು ಕೊಡು – ಕೊಳ್ಳುವ ಸಂಗತಿಯಲ್ಲ. ಝೆನ್ ಪರಿಮಳದಂತೆ ಸ್ವಯಂವೇದ್ಯವಾದುದು…. ಝೆನ್ – ಇದು […]

ಸಂತ ಪರಂಪರೆ ಮತ್ತು ರಾಷ್ಟ್ರ ಭಾವನೆ

ಭಾರತದ ಕೇಂದ್ರ ಇರುವುದು ಧಾರ್ಮಿಕತೆಯಲ್ಲಿಯೇ. ಈ ಎಳೆಯೇ ನೂರಾರು ವೈವಿಧ್ಯಗಳ ಪ್ರಾಂತ್ಯಗಳನ್ನು ಒಂದು ಸೂತ್ರದಲ್ಲಿ ಬೆಸೆದಿಟ್ಟಿರುವುದು. ಅದಕ್ಕೆ ಪೂರಕವಾಗಿ ಇಲ್ಲಿ ಆಗಿಹೋದ ಸಂತರನೇಕರು ಸಮಾಜ ಸುಧಾರಣೆಯ ಹರಿಕಾರರಾಗಿಯೂ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ  ~ ಆನಂದಪೂರ್ಣ ಭಾರತ  ರಾಜಕೀಯವಾಗಿ ಹಲವು ರಾಜ್ಯಗಳ ಒಕ್ಕೂಟ ಎನ್ನುವುದು ನಿಜ. ಆದರೆ ವಾಸ್ತವದಲ್ಲಿದು ಹಲವು ಸಂಸ್ಕೃತಿಗಳ, ಧರ್ಮಗಳ, ತತ್ತ್ವಗಳ, ಸಂಪ್ರದಾಯಗಳ ಒಕ್ಕೂಟ. ಈ ವಿಭಿನ್ನತೆಯನ್ನು ಒಗ್ಗೂಡಿಸಿರುವ ಮಹಾನ್ ಶಕ್ತಿಯೆಂದರೆ ಅದು ಅಧ್ಯಾತ್ಮ. ಭಾರತ ಸ್ವಾತಂತ್ರ್ಯಾನಂತರ ಒಂದು ಗಣರಾಜ್ಯವಾಗಿ ರೂಪುಗೊಂಡಿರುವಲ್ಲಿ ರಾಜಕೀಯ ಇಚ್ಛಾಶಕ್ತಿಯಷ್ಟೇ ಧಾರ್ಮಿಕ – ಆಧ್ಯಾತ್ಮಿಕ […]

ನಿಮಿಷದಲ್ಲಿ ಕರಗುವ ಮಂಜುಗಡ್ಡೆಯೂ ಕೀಟಕ್ಕೆ ಶಾಶ್ವತವೇ!

ಮನುಷ್ಯನ ಶಾಶ್ವತದ ಪರಿಕಲ್ಪನೆ ಎಂಬುದು ಸಾಪೇಕ್ಷವಾದುದು. ಈ ಸಾಪೇಕ್ಷವಾದ ಶಾಶ್ವತದ ಪರಿಕಲ್ಪನೆಯಿಂದ ಬಿಡುಗಡೆ ಪಡೆದು ನಿರಪೇಕ್ಷವಾದ ಶಾಶ್ವತ ಯಾವುದು ಎಂಬುದನ್ನು ಕಂಡುಕೊಳ್ಳುವುದಕ್ಕೆ ಎಲ್ಲಾ ಆಚಾರ್ಯರು ಪ್ರಯತ್ನಿಸಿದರು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ~ ಅಚಿಂತ್ಯ ಚೈತನ್ಯ ಜಗತ್ತು ಸತ್ಯವೇ ಅಥವಾ ಮಿಥ್ಯೆಯೇ? ಭಾರತೀಯ ತತ್ವಪರಂಪರೆಯನ್ನು ಬೆಳೆಸಿದ ಹಲವು ಆಚಾರ್ಯರು ಈ ಪ್ರಶ್ನೆಗೆ ಬಹಳ ಸುದೀರ್ಘವಾದ ಉತ್ತರಗಳನ್ನೇ ನೀಡಿದ್ದಾರೆ. ಅವುಗಳದ್ದೊಂದು ಸಮೀಕ್ಷೆಯನ್ನು ನಡೆಸುವುದಕ್ಕೇ ವರ್ಷಗಳ ಅಧ್ಯಯನ ಅಗತ್ಯವಿದೆ. ಆ ಸಂಕೀರ್ಣ ಚರ್ಚೆಗೆ ಹೋಗದೆ ಸರಳವಾಗಿ ಇದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. […]