ಎಲ್ಲ ಆಧ್ಯಾತ್ಮಿಕ ಅನ್ವೇಷಣೆಗಳ ಅಂತಿಮ ನೆಲೆ ಯಾವುದು?

ಸತ್ಯ ಎನ್ನುವ ಕಲ್ಪನೆಯಲ್ಲಿ ಎಲ್ಲವೂ ಅಡಗಿದೆ. ಅದನ್ನ ಕಾಣುವ ವಿಧಾನ ಮಾತ್ರ ಭಿನ್ನವಾದುದು. ಅಂತಿಮ ಸತ್ಯವನ್ನು ಅರಸುತ್ತಾ ಹೋಗುವವರಿಗೆ, ಅಂಥದೊಂದಿದೆ ಎಂಬ ಅರಿವು ಇದೆಯಲ್ಲ, ಅದೇ ಅತ್ಯಂತ ವಿಸ್ಮಯದ ಅರಿವು. ಇದರ ಉತ್ತರ, ವಿಭಿನ್ನ ದೃಷ್ಟಿಕೋನಗಳಿಗೆ ಅನುಗುಣವಾಗಿ ಭಿನ್ನಭಿನ್ನವಾಗಿ ಕಂಡುಬರುತ್ತದೆ. ಸಾಧಕನ ಇಷ್ಟದೇವತೆಯಿರಲಿ, ಎಲ್ಲ ದೇವತೆಗಳ ಮೂಲವೆನ್ನಲಾದ ನಿರ್ಗುಣ ನಿರಾಕಾರ ಅದ್ವೈತ ಬ್ರಹ್ಮನಿರಲಿ, ವಿಷ್ಣು, ರಾಮ, ದೇವಿಯೇ ಮೊದಲಾದ ದೇವತಾ ತತ್ತ್ವಗಳಿರಲಿ – ಅಂತಿಮ ಹಂತದಲ್ಲಿ ಸರ್ವವ್ಯಾಪಕವಾದ ಇಂದ್ರಿಯಾತೀತ ತಾತ್ತ್ವಿಕತೆಯನ್ನು ತಲುಪುತ್ತವೆ. ಇವೆಲ್ಲ ದೃಷ್ಟಿಕೋನಗಳ ಕೊನೆಯ ಮಾತೆಂದರೆ, […]

ಸತ್ಯವನ್ನು ಹುಡುಕಿ ತಂದ ಸಹೋದರರು : ಓಶೋ ಹೇಳಿದ ಕಥೆ

ಒಮ್ಮೆ ಒಬ್ಬ ತಂದೆ ತನ್ನ ಐವರು ಮಕ್ಕಳನ್ನು ಕರೆದು, “ಸತ್ಯವನ್ನು ಹುಡುಕಿಕೊಂಡು ಬನ್ನಿ” ಅನ್ನುತ್ತಾನೆ. ತಂದೆಯ ಆದೇಶವನ್ನು ಹೊತ್ತು ಐವರೂ ಸಹೋದರರು ವಿಭಿನ್ನ ದಿಕ್ಕುಗಳಿಗೆ ತೆರಳುತ್ತಾರೆ. ವರ್ಷಗಳ ನಂತರ ಮರಳಿ ಬರುತ್ತಾರೆ. ಆಗ ಮರಣಶಯ್ಯೆಯಲ್ಲಿರುವ ತಂದೆ ಅವರನ್ನು ಕುರಿತು, “ಸತ್ಯವು ದೊರೆಯಿತೆ?” ಎಂದು ಕೇಳುತ್ತಾನೆ. ಆಗ ಮೊದಲನೆಯವನು ವೇದಗಳೆಲ್ಲದರ ಸಾರಾಂಶವನ್ನು ಕಂಠಪಾಠವಾಗಿ ಒಪ್ಪಿಸುತ್ತಾನೆ. ಎರಡನೆಯವನು ಉಪನಿಷತ್ ಸೂತ್ರಗಳನ್ನೆಲ್ಲ ಹೇಳುತ್ತಾನೆ. ಮೂರನೆಯವನು ಪುರಾಣಗಳ ಸಾರಸರ್ವವನ್ನು ಹೇಳುತ್ತಾನೆ. ನಾಲ್ಕನೆಯವನು ಧರ್ಮಶಾಸ್ತ್ರಗಳೆಲ್ಲವನ್ನು ಅರುಹುತ್ತಾನೆ. ಐದನೆಯವನು ಮಾತ್ರ ತಂದೆ ಎದುರು ತಲೆ ಬಾಗಿ […]

ಸತ್ಯ : ತಾವೋ ಧ್ಯಾನ ~ 24

ಸತ್ಯ ಎಂದು ನಾವು ಯಾವುದನ್ನ ಹೆಸರಿಸುತ್ತೆವೆಯೋ ಅದನ್ನ ಮೂರು ವಿಧವಾಗಿ ಗುರುತಿಸುವ ಪ್ರಯತ್ನ ಮಾಡಲಾಗುತ್ತದೆ. ಮೊದಲನೇಯದು ಅನುಭವ ಜನ್ಯವಾದ ಸತ್ಯ. ಎರಡನೇಯ ಬಗೆಯ ಸತ್ಯ, ತರ್ಕದಿಂದ ಹುಟ್ಟಿದ್ದು. ಮೂರನೇ ಬಗೆಯ ಸತ್ಯ ಇವೆರಡಕ್ಕಿಂತಲೂ ಭಿನ್ನವಾದದ್ದು. ಅದೇ ‘ಅನುಭಾವ’ ~ ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ ತಾವೋ ಮಾತಿಗೆ ನಿಲುಕುವುದಿಲ್ಲ ಮಾತಿಗೆ ನಿಲುಕುವುದು ತಾವೋ ಅಲ್ಲ. ಆದ್ದರಿಂದ ಸಂತನಿಗೆ, ಮಾತಿನ ಹುಕಿಯಿಲ್ಲ, ಮುಟ್ಟುವ ಬಯಕೆಯಿಲ್ಲ, ಅಲೆಯುವ ಮನಸ್ಸಿಲ್ಲ, ಇರಿಯುವ ಛಲವಿಲ್ಲ. ಅವನಿಗೆ ಸಿಕ್ಕು ಬಿಡಿಸುವುದು ಇಷ್ಟ, ಮೈ […]

ಚೇತನವಲ್ಲದೆ ಸಾಕ್ಷಿ ಎಂಬುದಿಲ್ಲ….

ರೂಪವು ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ. ಆಕಾರವೂ ಕೂಡಾ. ಯಾವುದು ಸತತವಾಗಿ ಬದಲಾಗುತ್ತಲೇ ಇರುತ್ತದೆಯೋ ಅದನ್ನು ನಾವು ಸತ್ಯವೆಂದು ಕರೆಯುವುದಿಲ್ಲ. ಯಾವುದು ಬದಲಾಗುವುದೇ ಇಲ್ಲವೋ, ಯಾವಾಗಲೂ ಒಂದೇ ರೀತಿಯಾಗಿ ಇರುತ್ತದೆಯೋ ಅದನ್ನು ಸತ್ಯವೆಂದು ಕರೆಯುತ್ತೇವೆ ~ Whosoever Ji ಎಲ್ಲಿ ಮತ್ತೊಂದು ಇರುವುದಿಲ್ಲವೋ ಅದು ಅದ್ವೈತ. ಎರಡಿಲ್ಲದ ಸ್ಥಿತಿಯೇ ಅದ್ವೈತ. ಈ ಎಲ್ಲ ದ್ವೈತದ ಹಿಂದೆ ಮೂಲತಃ ಅದ್ವೈತವೇ ಇದೆ. ಅದು ಈ ಎಲ್ಲದರ ಮುಖ್ಯ ಸ್ರೋತವಾಗಿದೆ. ಹೀಗಿರುವಾಗ ಅದನ್ನು ಶಬ್ದಗಳಲ್ಲಿ ವಿವರಿಸೋದು ಹೇಗೆ? ಯಾವುದಕ್ಕೆ ಒಂದು ರೂಪವಿದೆಯೋ, […]

ಸತ್ಯ ನದಿಯಂತೆ…. ಹೌದೆ? : ಝೆನ್ ಕಥೆ

ಒಬ್ಬ ಝೆನ್ ಮಾಸ್ಟರ್ ಸಾವಿನ ಹಾಸಿಗೆಯಲ್ಲಿದ್ದ. ಅವನ ಸುತ್ತ ಶಿಷ್ಯರೆಲ್ಲ ನೆರೆದಿದ್ದರು. ಹಿರಿಯ ಶಿಷ್ಯ ಮಾಸ್ಟರ್ ನತ್ತ ಬಾಗಿ ಕಿವಿಯಲ್ಲಿ ಮಾತಾಡಿದ. “ ಮಾಸ್ಟರ್, ಇಲ್ಲಿ ನೆರೆದಿರುವ ಶಿಷ್ಯರಿಗಾಗಿ ನಿಮ್ಮ ಕೊನೆಯ ಸಂದೇಶವೇನಾದರೂ ಇದೆಯೆ?” ಮಾಸ್ಟರ್ ನಿಧಾನವಾಗಿ ಕಣ್ತೆರೆಯುತ್ತ ಹಿರಿಯ ಶಿಷ್ಯನ ಕಿವಿಯಲ್ಲಿ ಸಣ್ಣ ದನಿಯಲ್ಲಿ ಹೇಳಿದ. “ ಅವರಿಗೆಲ್ಲ ಹೇಳು, ಸತ್ಯ ನದಿಯಂತೆ” ಹಿರಿಯ ಶಿಷ್ಯ ತನ್ನ ಪಕ್ಕ ಕುಳಿತವನ ಕಿವಿಯಲ್ಲಿ ಮಾಸ್ಟರ್ ಹೇಳಿದ ಮಾತು ಹೇಳಿದ, ಸತ್ಯ ನದಿಯಂತೆ. ಹೀಗೆ ಪ್ರತಿಯೊಬ್ಬರೂ ತಮ್ಮ ಪಕ್ಕದಲ್ಲಿ […]

ಸತ್ಯದ ದೇಹಕ್ಕೆ ಸುಳ್ಳಿನ ತಲೆ! : ಆಫ್ರಿಕನ್ನರ ಸೃಷ್ಟಿ ಕಥನಗಳು #2

ಒಲೋಫಿ ಸತ್ಯ ಮತ್ತು ಸುಳ್ಳುಗಳನ್ನು ಸೃಷ್ಟಿಸಿದ. ಅವೆರಡೂ ಕಾದಾಡಿಕೊಂಡವು. ಕೊನೆಗೆ ಸತ್ಯದ ದೇಹಕ್ಕೆ ಸುಳ್ಳಿನ ತಲೆ ಬಂದಿತು. ಅದು ಹೇಗೆ? ಇಲ್ಲಿದೆ ಸ್ವಾರಸ್ಯಕರ ಕಥನ….  ಒಲೋಫಿ ಭೂಮಿಯನ್ನು ಅಲ್ಲಿ ಚರಾಚರ ವಸ್ತುಗಳನ್ನೂ ಸೃಷ್ಟಿಸಿದ. ಸುಂದರ-ಕುರೂಪಿ ವಸ್ತುಗಳನ್ನೂ ಸೃಷ್ಟಿಸಿದ. ಅವನು ಸತ್ಯವನ್ನೂ, ಸುಳ್ಳನ್ನೂ ಸೃಷ್ಟಿಸಿದ. ಅವನು ಸತ್ಯವನ್ನು ಪರಮ ಶಕ್ತಿಶಾಲಿಯಾಗಿ ದೈತ್ಯಾಕಾರವಾಗಿ ಮಾಡಿದ. ಸುಳ್ಳನ್ನು ಪೀಚಲಾಗಿ, ಅಶಕ್ತವಾಗಿ ಮಾಡಿದ. ಆದರೆ ಆತ ಸುಳ್ಳಿಗೆ ಒಂದು ಹರಿತ ಬಾಕುವನ್ನು ನೀಡಿದ ಒಂದು ದಿನ ಸತ್ಯ ಮತ್ತು ಸುಳ್ಳು ಕಾದಾಟಕ್ಕಿಳಿದರು. ದೈತ್ಯ ದೇಹವೂ […]

ಸತ್ಯವಂತರ ಹಾದಿ, ಸ್ವಯಂ ಮೋಕ್ಷದ ಹಾದಿ….

ಸತ್ಯವು ಒಂದೇ ಆದರೂ ಋಗ್ವೇದದ ಮಾತಿನಂತೆ, ಅದನ್ನು ನಡೆಯುವ ದಾರಿಗಳು ಹಲವು. ಕೊಟ್ಟ ಮಾತಿಗೆ ಬದ್ಧನಾಗಿರುವುದು ಹರಿಶ್ಚಂದ್ರನಿಗೆ ಸತ್ಯ ಮಾರ್ಗವಾಯಿತು. ಪ್ರಜಾರಂಜಕನಾಗಿ ಉಳಿಯುವುದು ಶ್ರೀ ರಾಮನಿಗೆ ಸತ್ಯವಾಯಿತು. ದಾನಮಾಡುವುದೇ ಕರ್ಣನಿಗೆ ಸತ್ಯದೆಡೆಗೆ ಹಾದಿಯಾಯಿತು; ಸೀತೆಯಂಥ ಸತಿಯರಿಗೆ ಪಾತಿವ್ರತ್ಯವೇ ಸತ್ಯದ ಸಾಧನೆಯಾಯಿತು. ಹೀಗೆ ಮಹಾ ವ್ಯಕ್ತಿಗಳ ಒಬ್ಬೊಬ್ಬರ ಜೀವನವೂ ಪರಮಸತ್ಯದ ವ್ಯಾಖ್ಯಾನದಂತಿದೆ ~ ಸಾ.ಹಿರಣ್ಮಯೀ ಸತ್ಯವಂತರ ಹಾದಿ ಸ್ವಯಂ ಮೋಕ್ಷದ ಹಾದಿ. ಸವಾಲುಗಳ ಹಾದಿ. ಸತ್ಯ ಸಾಧಕರ ಯಾತ್ರೆ ಮೊದಲಾಗುವುದು ತ್ಯಾಗದಿಂದ. ಈ ಹೆಬ್ಬಾಗಿಲಿನ ಮೂಲಕವೇ ಅವರು ಸತ್ಯದ ಗುರಿ ತಲುಪುತ್ತಾರೆ. ಹಿಂದೂ ಧರ್ಮದ ಪ್ರಪ್ರಾಚೀನ ಜ್ಞಾನ […]

ನಿಮಿಷದಲ್ಲಿ ಕರಗುವ ಮಂಜುಗಡ್ಡೆಯೂ ಕೀಟಕ್ಕೆ ಶಾಶ್ವತವೇ!

ಮನುಷ್ಯನ ಶಾಶ್ವತದ ಪರಿಕಲ್ಪನೆ ಎಂಬುದು ಸಾಪೇಕ್ಷವಾದುದು. ಈ ಸಾಪೇಕ್ಷವಾದ ಶಾಶ್ವತದ ಪರಿಕಲ್ಪನೆಯಿಂದ ಬಿಡುಗಡೆ ಪಡೆದು ನಿರಪೇಕ್ಷವಾದ ಶಾಶ್ವತ ಯಾವುದು ಎಂಬುದನ್ನು ಕಂಡುಕೊಳ್ಳುವುದಕ್ಕೆ ಎಲ್ಲಾ ಆಚಾರ್ಯರು ಪ್ರಯತ್ನಿಸಿದರು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ~ ಅಚಿಂತ್ಯ ಚೈತನ್ಯ ಜಗತ್ತು ಸತ್ಯವೇ ಅಥವಾ ಮಿಥ್ಯೆಯೇ? ಭಾರತೀಯ ತತ್ವಪರಂಪರೆಯನ್ನು ಬೆಳೆಸಿದ ಹಲವು ಆಚಾರ್ಯರು ಈ ಪ್ರಶ್ನೆಗೆ ಬಹಳ ಸುದೀರ್ಘವಾದ ಉತ್ತರಗಳನ್ನೇ ನೀಡಿದ್ದಾರೆ. ಅವುಗಳದ್ದೊಂದು ಸಮೀಕ್ಷೆಯನ್ನು ನಡೆಸುವುದಕ್ಕೇ ವರ್ಷಗಳ ಅಧ್ಯಯನ ಅಗತ್ಯವಿದೆ. ಆ ಸಂಕೀರ್ಣ ಚರ್ಚೆಗೆ ಹೋಗದೆ ಸರಳವಾಗಿ ಇದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. […]

ಸತ್ಯವನ್ನು ಮಾರಲೊಲ್ಲದ ಮಹಾವೀರ ಮತ್ತು ರಾಜನಿಗೆ ಪಾಠ ಹೇಳಿದ ಜಾಡಮಾಲಿ

ಒಮ್ಮೆ ಹೀಗಾಯ್ತು. ಮೇಲಿಂದ ಮೇಲೆ ಮಹಾವೀರನ ಗುಣಗಾನವನ್ನು ಕೇಳಿ ಬೇಸತ್ತಿದ್ದ ರಾಜಾ ಬಿಂಬಾಸುರನಿಗೆ ಆತನನ್ನು ಒಂದು ಕೈ ನೋಡೇಬಿಡುವ ಎಂದು ಮನಸಾಯ್ತು. ತನ್ನ ಮಂತ್ರಿಯನ್ನು ಕರೆದು, “ಯಾಕೆ ನಮ್ಮ ಪ್ರಜೆಗಳು ದಂಡುಗಟ್ಟಿಕೊಂಡು ಮಹಾವೀರನ ಬಳಿ ಹೋಗುತ್ತಾರೆ? ಆತನ ಬಳಿ ಅಂಥದ್ದೇನಿದೆ?” ಎಂದು ಕೇಳಿದನು. ಅದಕ್ಕೆ ಮಂತ್ರಿ, “ಮಹಾಪ್ರಭೂ, ಮಹಾವೀರನ ಬಳಿ ಸತ್ಯವಿದೆ.” ಎಂದು ಚುಟುಕಾಗಿ ಉತ್ತರಿಸಿದನು. ಬಿಂಬಾಸುರನಿಗೆ ತಲೆ ಕೆಟ್ಟಿತು. ಯಕಶ್ಚಿತ್ ಸತ್ಯಕ್ಕಾಗಿ ಜನ ತಮ್ಮ ಸಮಯ ಪೋಲು ಮಾಡಿಕೊಂಡು ಹೋಗಿ ಅವನ ಕಾಲ ಬಳಿ ಕೂರುವುದೇ!? […]

ಯುಜಿ ಹೇಳಿದ್ದು …

“Illusion creates the idea of TRUTH to perpetuate illusion.” “ಭ್ರಮೆಯು ಭ್ರಮೆಯನ್ನು ಶಾಶ್ವತಗೊಳಿಸಲೆಂದೇ ಸತ್ಯವೆಂಬ ಕಲ್ಪನೆಯನ್ನು ಸೃಷ್ಟಿಸುತ್ತದೆ.” Illustration Courtesy: Kiran Madalu Personal Colelction  ಸತ್ಯವೆಂಬುದು ಕಾಲ್ಪನಿಕ. ಯಾವುದು ದೇಶ, ಕಾಲ, ವ್ಯಕ್ತಿ, ಸಂದರ್ಭಗಳ ಪಾಲಿಗೆ ಭಿನ್ನವಾಗಿರುತ್ತದೋ ಅದು ಕಲ್ಪನೆಯಲ್ಲದೆ ಮತ್ತೇನು? ಯುಜಿ ಕೃಷ್ಣಮೂರ್ತಿಯವರ ಮಾತು ಪ್ರತಿಪಾದಿಸುತ್ತಿರುವುದು ಇದನ್ನೇ. ಭ್ರಮೆ ಸುಳ್ಳನ್ನೇ ನಂಬಿಕೊಳ್ಳುವಂತೆ ಮಾಡುತ್ತದೆ ಅನ್ನುವುದು ಸರಿಯಷ್ಟೆ. ಸತ್ಯವೂ ಕೂಡ ನಮ್ಮನ್ನು ನಂಬಿಸುವ ಭ್ರಮೆಯೇ. “ಸತ್ಯವೆಂಬುದು ನಮ್ಮ ಕಲ್ಪನೆಯನ್ನು ಶಾಶ್ವತಗೊಳಿಸುವ ಭ್ರಮೆ” ಅನ್ನುವುದು […]