ಬಿಡುಗಡೆಯ ಮಾತಿಗೆ ಮೊದಲು ಬಂಧನದ ಮೂಲ ಅರಿಯಿರಿ : ಸ್ವಾಮಿ ರಾಮತೀರ್ಥ ವಿಚಾರ ಧಾರೆ

ಈ ಭವ್ಯವೂ ಸಮೃದ್ಧವೂ ಆದ ಇಡೀ ವಿಶ್ವವೆಂಬ ಮಹಾರಣ್ಯದಲ್ಲಿ ಇಕ್ಕಟ್ಟಾದ ಕಂಠವುಳ್ಳ ಒಂದು ಹೂಜಿ ಇದೆ. ನಿಮ್ಮ ಪುಟ್ಟ ಮೆದುಳೇ ಆ ಸಂಕುಚಿತ ಕಂಠದ ಹೂಜಿ. ಇವು ನಮಗೆ ಇಷ್ಟವಾದವು, ಇವು ನಮ್ಮಮೆಚ್ಚಿನವು ಎಂದು ನೀವು ಅಕಾರಣವಾಗಿ ಕಲ್ಪಿಸಿಕೊಂಡ ಕೆಲವು ವಿಷಯಗಳೇ ನಿಮ್ಮ ಮೆದುಳೆಂಬ ಹೂಜಿಯಲ್ಲಿ ನೀವು ಹಾಕಿಟ್ಟುಕೊಂಡಿರುವ ತಿನಿಸುಗಳು. ನಿಮ್ಮ ಮನಸ್ಸೆಂಬ ಮಂಗ ಇವು ನನಗೆ ಬೇಕು, ಇವು ನನ್ನವು ಎಂದು ನಿಮ್ಮ ಮೆದುಳಿನಲ್ಲಿ ನೀವೇ ಇಟ್ಟುಕೊಂಡಿರುವ ಮೆಚ್ಚಿನ ತಿಂಡಿಗಳನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತದೆ.

ಗಣಿತ ಮತ್ತು ಅಧ್ಯಾತ್ಮದ ಕಲಿಕೆ : ಸ್ವಾಮಿ ರಾಮತೀರ್ಥರ ವಿಚಾರ ಧಾರೆ

ಗಣಿತವನ್ನಾಗಲೀ ಅಧ್ಯಾತ್ಮವನ್ನಾಗಲೀ ಸರಳೀಕರಿಸಲು ಬರುವುದಿಲ್ಲ, ಈ ವಿಷಯವನ್ನು ಕಲಿಯಲು ಶ್ರದ್ಧೆ
ಜೊತೆಯಲ್ಲಿಮತ್ತೆ ಮತ್ತೆ ಮನನ ಮಾಡುವುದೇ ರಾಜಮಾರ್ಗ ಎನ್ನುತ್ತಾರೆ ಸ್ವಾಮಿ ರಾಮತೀರ್ಥ.

ಪರಮ ಚೈತನ್ಯದೆಡೆಗೆ ಪ್ರೇಮವಿರಲಿ ~ ರಾಮತೀರ್ಥರ ವಿಚಾರ ಧಾರೆ

ಪ್ರೇಮಿಯು ಪ್ರಿಯನನ್ನೇ ಎಲ್ಲದರಲ್ಲೂ ಕಾಣುವಂತೆ; ಬ್ರಹ್ಮಸತ್ತೆಯನ್ನು ಮಾತ್ರವೇ ಭಾವಿಸಿ, ಪ್ರತಿಮೆಯಲ್ಲಿ ಪ್ರತಿಮಾಪನೆಯು ಹಾರಿ ಹೋಗಲಿ, ಚೈತನ್ಯ ಸ್ವರೂಪ ಭಗವಂತನನ್ನು ಮಾತ್ರವೇ ದರ್ಶಿಸಿ

ಪಿತೂರಿಕೋರರ ಸಂಚಿನಿಂದ ಗೆಳೆಯನಿಗೆ ಗುರುವಾದ ಅಯಾಜ್!! : ರಾಮತೀರ್ಥರು ಹೇಳಿದ ಕಥೆ

ಹುಲ್ಲು ಕತ್ತರಿಸುವ ಕೆಲಸ ಮಾಡುತ್ತಿದ್ದ ಗೆಳೆಯ ಅಯಾಜನನ್ನು ದೊರೆ ಮಹಮೂದ್, ತನ್ನ ಮುಖ್ಯಮಂತ್ರಿಯನ್ನಾಗಿ ನೇಮಿಸಿಕೊಂಡ. ಸಂಚುಕೋರರ ಪಿತೂರಿಯಿಂದ ಮುಖ್ಯಮಂತ್ರಿ, ಆತನ ಗುರುವೂ ಆದ!!