ಧನ್ವಂತರಿ ದೇವತೆಗಳ ವೈದ್ಯ. ವೈದ್ಯರ ದೇವತೆ ಕೂಡಾ! ದೈಹಿಕ ಕಾಯಿಲೆಗಳಿಗೆ ಔಷಧ ನೀಡುವ ಧನ್ವಂತರಿಯನ್ನು ಸ್ತುತಿಸುತ್ತಾ ಯಾಚಕರು “ಎಲ್ಲ ರೋಗಗಳಿಗೂ ಮೂಲವಾಗಿರುವ ನನ್ನ ಸರ್ವ ಪಾಪಗಳನ್ನು ಅನುದಿನವೂ ನಿವಾರಿಸುವ ಕೃಪೆ ತೋರು” ಎಂದು ಪ್ರಾರ್ಥಿಸುತ್ತಿದ್ದಾರೆ….
“ನೀನೇ ನಮ್ಮ ಪರಮ ಅಗತ್ಯ” : ಖಲೀಲ್ ಜಿಬ್ರಾನನ ‘ಪ್ರಾರ್ಥನೆ’ ಪದ್ಯ ವಾಚನ
ಖಲೀಲ್ ಗಿಬ್ರಾನ್’ನ ‘ಪ್ರವಾದಿ’ ಕೃತಿಯಿಂದ, ಅಧ್ಯಾಯ: ‘ಪ್ರಾರ್ಥನೆ’… । ಅನುವಾದ: ಚಿದಂಬರ ನರೇಂದ್ರ, ವಾಚನ : ಚೇತನಾ ತೀರ್ಥಹಳ್ಳಿ
ಸೂಫಿ ಬಯಾಜಿದ ಪಾಠ ಕಲಿತ ಕಥೆ : tea time story
ಬದಲಾವಣೆಯನ್ನು ಪ್ರತಿಯೊಬ್ಬರೂ ಬಯಸುತ್ತಾರೆ. ಕೆಲವರು ಜಗತ್ತು ಬದಲಾಗಬೇಕೆಂದು ಹಪಹಪಿಸುತ್ತಾರೆ, ಮತ್ತೆ ಕೆಲವರು ನಾನು ಜಗತ್ತನ್ನು ಬದಲಾಯಿಸಿಬಿಡುತ್ತೇನೆ ಎಂದು ಭ್ರಮಿಸುತ್ತಾರೆ. ತಾನು ಕೂಡಾ ಇಂಥ ಭ್ರಮೆಯಲ್ಲಿ ಇದ್ದೆನೆಂದು ಸೂಫಿ ಸಂತ ಬಯಾಜಿದ್ ಬಸ್ತಮಿ ತನ್ನ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾನೆ
ಋಗ್ವೇದದಿಂದ : ಬೆಳಗಿನ ಪ್ರಾರ್ಥನೆ
ಋಗ್ವೇದದಿಂದ ಒಂದು ಪ್ರಾರ್ಥನೆ
ದಿನಾರಂಭಕ್ಕೆ ಎರಡು ಪ್ರಾರ್ಥನೆಗಳು
ದಿನವನ್ನು ಅರ್ಥಪೂರ್ಣವಾಗಿ ಆರಂಭಿಸಲು ಮುಂಜಾನೆಯ ಎರಡು ಪ್ರಾರ್ಥನೆಗಳು ಇಲ್ಲಿವೆ :
ಕೆಡುಕಿನಿಂದ ಒಳಿತಿನೆಡೆಗೆ ನಡೆಸು : ಬೃಹದಾರಣ್ಯಕದಿಂದ ಒಂದು ಪ್ರಾರ್ಥನೆ
ಬೃಹದಾರಣ್ಯಕ ಉಪನಿಷತ್ತಿನಿಂದ ಒಂದು ಪ್ರಾರ್ಥನೆ
ಸಾಮರ್ಥ್ಯ, ಚೈತನ್ಯ ಮತ್ತು ಅನುಗ್ರಹಕ್ಕಾಗಿ ಪ್ರಜಾಪ್ರತಿಗೆ ಮೂರು ಪ್ರಾರ್ಥನೆಗಳು : ಋಗ್ವೇದದಿಂದ
ಋಗ್ವೇದದ ಹತ್ತನೇ ಮಂಡಲದಲ್ಲಿ ಬರುವ ಪ್ರಜಾಪತಿಯನ್ನು ಸ್ತುತಿಸುವ ಮೂರು ಪ್ರಾರ್ಥನೆಗಳನ್ನು ಇಲ್ಲಿ ನೀಡಲಾಗಿದೆ. ಇಲ್ಲಿ ಋಷಿಗಳು ಪ್ರಜಾಪತಿಯನ್ನು ಬಣ್ಣಿಸುತ್ತಾ “ಇವನಿಗಲ್ಲದೆ ಇನ್ನಾರಿಗೆ ಹವಿಸ್ಸನ್ನು ಸಮರ್ಪಿಸೋಣ?” ಎಂದು ಕೇಳುತ್ತಿದ್ದಾರೆ. ಕಲಿಯುಗದಲ್ಲಿ ಪ್ರಾರ್ಥನೆಯೇ ಹವಿಸಮರ್ಪಣೆಯಾಗಿದೆ.
ಬುದ್ಧಿಶಕ್ತಿಯನ್ನು ಉದ್ದೀಪಿಸಲು ಯಜುರ್ವೇದದ ಒಂದು ಪ್ರಾರ್ಥನೆ
‘ಮಾಂ ಮೇಧಾವಿನಂ ಕುರು’ ನನ್ನನ್ನು ಮೇಧಾವಿಯನ್ನಾಗಿ ಮಾಡು…. ಇಷ್ಟೇ. ಇದೇ ನಿಮ್ಮ ಪ್ರಾರ್ಥನೆಯ ಮೂಲಬೀಜ. ಪ್ರಾರ್ಥನೆಗೆ ಮೊದಲು ಇದನ್ನು ಸ್ಪಷ್ಟ ಮಾಡಿಕೊಳ್ಳಿ ~ ಸಾ.ಹಿರಣ್ಮಯೀ
ಪ್ರಾರ್ಥನೆಗೆ ಭಗವಂತ ಉತ್ತರಿಸುವನೇ? ಹೇಗೆ!?
ನಾವು ಪ್ರಾರ್ಥಿಸುವುದು ಯಾವಾಗ? ಭಗವಂತ ನಮ್ಮ ಪ್ರಾರ್ಥನೆಗೆ ಉತ್ತರಿಸುತ್ತಾನೆಯೇ? ಪ್ರಾರ್ಥನೆಗೆ ಭಗವಂತ ಕೆಲವೊಮ್ಮೆ ಬೇಗೆ, ಕೆಲವೊಮ್ಮೆ ನಿಧಾನವಾಗಿ ಉತ್ತರಿಸುವುದೇಕೆ? ಕೆಲವೊಮ್ಮೆ ಭಗವಂತ ಉತ್ತರಿಸುವುದೇ ಇಲ್ಲ. ಏಕೆ ಹೀಗೆ? ಪ್ರಾರ್ಥನೆ ಪಠಿಸುವುದು ಅಂಧಶ್ರದ್ಧೆಯಲ್ಲವೆ? ಪದಗಳಿಗೆ ಅಷ್ಟೆಲ್ಲ ಶಕ್ತಿ ಇದೆಯೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಇಲ್ಲಿದೆ… ~ ಸಾ.ಹಿರಣ್ಮಯಿ ಪ್ರಾರ್ಥನೆಗೆ ಭಗವಂತ ನಿಜಕ್ಕೂ ಒಲಿಯುವನೇ? ಪ್ರಾರ್ಥನೆ ಪರಿಣಾಮಕಾರಿಯೇ? ಪ್ರಾರ್ಥನೆಯಿಂದ ಪ್ರಯೋಜನವಾದರೂ ಇದೆಯೇ? ಪ್ರಾರ್ಥನೆಗೆ ವ್ಯಯಿಸುವ ಸಮಯವನ್ನು ಪ್ರಯತ್ನಕ್ಕೆ ವಿನಿಯೋಗಿಸಬಹುದಲ್ಲವೆ? ಎಂದೆಲ್ಲ ಪ್ರಶ್ನೆಗಳು ಸಹಜವಾಗಿ ಕೇಳಿಬರುತ್ತವೆ. ಅದು ಹಾಗಲ್ಲ; […]
ಮಹಾನಿರ್ವಾಣತಂತ್ರ : ಬ್ರಹ್ಮಸ್ತೋತ್ರದಿಂದ ಬೆಳಗಿನ ಮೂರು ಪ್ರಾರ್ಥನೆಗಳು
ಆತ್ಯಂತಿಕ ಸತ್ಯವೂ ಸದ್ವಸ್ತುವೂ ವಿಶ್ವರೂಪಿಯೂ ಪರಮಗತಿಯೂ ಆಗಿರುವ ನಿರ್ಗುಣ ಪರಬ್ರಹ್ಮವನ್ನು ಸ್ತುತಿಸುವ ಮೂರು ಪ್ರಾರ್ಥನೆಗಳು ಇಲ್ಲಿವೆ. ಓಂ ನಮಸ್ತೇ ಸತೇ ಸರ್ವಲೋಕಾಶ್ರಯಾಯ ನಮಸ್ತೇ ಚಿತೇ ವಿಶ್ವರೂಪಾತ್ಮಕಾಯ | ನಮೋSದ್ವೈತತತ್ತ್ವಾಯ ಮುಕ್ತಿಪ್ರದಾಯ ನಮೋ ಬ್ರಹ್ಮಣೇ ವ್ಯಾಪಿನೇ ನಿರ್ಗುಣಾಯ || ಸರ್ವಲೋಕಗಳಿಗೆ ಆಶ್ರಯವಾದ ಸದ್ವಸ್ತುವಿಗೆ ನಮಸ್ಕಾರ; ವಿಶ್ವರೂಪಾತ್ಮಕವಾದ ಚಿದ್ವಸ್ತುವಿಗೆ ನಮಸ್ಕಾರ; ಮುಕ್ತಿ ನೀಡುವ ಅದ್ವೈತ ತತ್ತ್ವಕ್ಕೆ ನಮಸ್ಕಾರ; ಸರ್ವವ್ಯಾಪಿಯಾದ ನಿರ್ಗುಣ ಬ್ರಹ್ಮನೇ, ನಿನಗೆ ನಮಸ್ಕಾರ. ತ್ವಮೇಕಂ ಶರಣ್ಯಂ ತ್ವಮೇಕಂ ವರೇಣ್ಯಂ ತ್ವಮೇಕಂ ಜಗತ್ಕಾರಣಂ ವಿಶ್ವರೂಪಮ್ | ತ್ವಮೇಕಂ ಜಗತ್ಕರ್ತೃಪಾತೃಪ್ರಹರ್ತೃ ತ್ವಮೇಕಂ […]