“ಅರಿಯುವವರಿಗೆ ಅದು ತಿಳಿಯದು, ಅರಿವಿಲ್ಲದವರಿಗೆ ಅದು ತಿಳಿದಿದೆ” ಅನ್ನುತ್ತದೆ ಕೇನೋಪನಿಷತ್ತು.
ಎನ್ನ ನಾನು ಮರೆದು, ನಿಮ್ಮನರಿದಡೆ… : ಅಲ್ಲಮ ಪ್ರಭು ವಚನ
‘ನಾನು’ ಇಲ್ಲವಾದಾಗ ಘಟಿಸುವುದೇ ಸತ್ಯದ ಸಾಕ್ಷಾತ್ಕಾರ. ‘ನಾನು’ ಅರಿಯುತ್ತೇನೆ ಎಂಬ ಅಹಂಭಾವ ಸ್ವಲ್ಪವೂ ಕೂಡ ಅಲ್ಲಿರಬಾರದು – ಇದು ಅಲ್ಲಮ ಪ್ರಭುವಿನ ತಾತ್ಪರ್ಯ
ಬೌದ್ಧಿಕತೆ ನಮ್ಮ ಯಾವ ಸಮಸ್ಯೆಯನ್ನೂ ಪರಿಹರಿಸಲಾರದು : ಜಿಡ್ಡು ಕಂಡ ಹಾಗೆ
ಬೌದ್ಧಿಕತೆಯ ವಲಯವೇ ಸೀಮಿತವಾದದ್ದು ಏಕೆಂದರೆ ಬೌದ್ಧಿಕತೆ, ನಮ್ನನ್ನು ತಯಾರು ಮಾಡಿದ ಎಲ್ಲ ನಂಬಿಕೆಗಳ, ಸಂಪ್ರದಾಯಗಳ, ಎಲ್ಲ ಕಲಿಕೆಯ ಒಟ್ಟು ಮೊತ್ತ
ಕೆಡವುವುದೆಂದರೆ ಹೊಸದಾಗಿ ಕಟ್ಟುವುದು | ಜಿಡ್ಡು ಕಂಡ ಹಾಗೆ
ನಾವು ಕೆಡವಬೇಕಾದದ್ದು ಮಾನಸಿಕವಾಗಿ, ಪ್ರಜ್ಞಾಪೂರ್ವಕ ಅಥವಾ ಅಪ್ರಜ್ಞಾಪೂರ್ವಕವಾಗಿ ನಾವು ನಮ್ಮ ಸುತ್ತಲೂ ರಕ್ಷಣಾ ವ್ಯವಸ್ಥೆಗಳನ್ನ ಮತ್ತು ತರ್ಕಬದ್ಧವಾಗಿ, ವೈಯಕ್ತಿಕವಾಗಿ , ಆಳವಾಗಿ, ಕೆಲವೊಮ್ಮೆ ತೋರಿಕೆಗಾಗಿ ಕಟ್ಟಲಾಗಿರುವ ಭದ್ರತೆಗಳನ್ನ.
ಭಾವುಕತೆ ಮತ್ತು ಭಾವೋದ್ವೇಗ ಮತ್ತು ಕ್ರೌರ್ಯದ ಹುಟ್ಟು | ಜಿಡ್ಡು ಕಂಡ ಹಾಗೆ
ಭಾವುಕತೆ ಮತ್ತು ಭಾವೋದ್ವೇಗ ಇರುವಲ್ಲಿ ಹಿಂಸೆಯ ಹಾಜರಾತಿ ಪ್ರೇಮದ ಗೈರು ಹಾಜರಿ ಅನಿವಾರ್ಯ.
ಅಹಂಕಾರದ ಜ್ವರ ಇಳಿಸುವ ವಿದ್ವಾಂಸರ ಸಹವಾಸ : ನೀತಿಶತಕದಿಂದ, ಸುಭಾಷಿತ…
ನಮ್ಮ ವಿದ್ವತ್ತಿನ ಮಟ್ಟವನ್ನು ನಮಗಿಂತಲೂ ಹೆಚ್ಚು ವಿದ್ವಾಂಸರಾದರೊಡನೆ ತುಲನೆ ಮಾಡಿದಾಗ ನಾವೆಷ್ಟು ಚಿಕ್ಕವರು, ನಾವು ಓದುವುದು ಇನ್ನೂ ಇದೆ ಎನ್ನುವ ಅರಿವು ಮೂಡುತ್ತದೆ. ಆ ಅರಿವು ಮುಂದಿನ ಪ್ರಗತಿಗೆ ಪೂರಕವಾಗುತ್ತದೆ : ಭರ್ತೃಹರಿ
ಕಾಲೋ ನ ಯಾತೋ ವಯಮೇವ ಯಾತಾ : ದಿನದ ಸುಭಾಷಿತ
ಮನುಷ್ಯರೆಂದೂ ಸರ್ವತಂತ್ರ ಸ್ವತಂತ್ರರಲ್ಲ. ಕಣ್ಣಿಗೆ ಕಾಣದ ಕಡಿವಾಣಗಳು ಬೀಳುತ್ತಲೇ ಇರುತ್ತವೆ. ಇದುವೇ ಜೀವನ….
ಸುಖ ದುಃಖಗಳು ಕಾಡದಿರುವಂತೆ ಏನು ಮಾಡಬೇಕು? : ಭಗವದ್ಗೀತೆಯ ಬೋಧನೆ
ಶ್ರೀ ಕೃಷ್ಣನು ಭಗವದ್ಗೀತೆಯ ಎರಡನೇ ಅಧ್ಯಾಯದಲ್ಲಿ ಸ್ಥಿತಪ್ರಜ್ಞತೆಯ ಲಕ್ಷಣಗಳನ್ನು ವಿವರಿಸಿದ್ದು, ಅವು ಈ ದಿನಮಾನಕ್ಕೆ ಅತ್ಯಂತ ಪ್ರಸ್ತುತವಾಗಿದೆ.
ಎಲ್ಲ ಮೋಡಗಳೂ ಮಳೆಗರಿಯುವುದಿಲ್ಲ : ಬೆಳಗಿನ ಹೊಳಹು
ಪಂಚೇಂದ್ರಿಯಗಳ ಮೇಲೆ ಹಿಡಿತವಿರಲಿ : ಭಾಗವತ ಪುರಾಣ
ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಸಂಯಮಿಗಳಾಗಿರಬೇಕು ಎಂದು ಭಾಗವತ ಹೇಳುತ್ತದೆ. ಯಾವಂತೋ ವಿಷಯಾಃ ಪ್ರೇಷ್ಠಾಸ್ತ್ರಿಲೋಕ್ಯಾಮಜಿತೇಂದ್ರಿಯಂ | ಸ ಶಕ್ನುವಂತಿತೇ ಸರ್ವೇ ಪ್ರತಿ ಪೂರಯಿತುಂ ನೃಪ || ಭಾಗವತ ಪುರಾಣ || ಅರ್ಥ: ಸುಖ ಸಾಧನಗಳಾದ ವಿಷಯಗಳು ಸಮಸ್ತ ಸೃಷ್ಟಿಯಲ್ಲಿ ಎಷ್ಟಿವೆಯೋ ಅವೆಲ್ಲ ಒಟ್ಟಾದರೂ ಇಂದ್ರಿಯಗಳ ಸೆಳೆತಕ್ಕೆ ಒಳಗಾದ ವ್ಯಕ್ತಿಯನ್ನು ತೃಪ್ತಿ ಪಡಿಸಲಾರವು. ತಾತ್ಪರ್ಯ: ಮನುಷ್ಯನಿಗೆ ಪಂಚೇಂದ್ರಿಯಗಳು ಇವೆ. ಕಣ್ಣು, ಕಿವಿ, ನಾಲಿಗೆ, ಮೂಗು ಹಾಗೂ ಚರ್ಮ -ಇವು ಪಂಚೇಂದ್ರಿಯಗಳು. ಈ ಇಂದ್ರಿಯಗಳ ಸೆಳೆತ ಅಸಾಧಾರಣವಾದದ್ದು. ಇಂದ್ರಿಯಗಳ ಸೆಳೆತವು ತುಂಬಾ ಶಕ್ತಿಯುತವಾದದ್ದು. […]