ಸ್ವಾತಂತ್ರ್ಯ ಬಯಸಿದ ಗಿಳಿ ಮತ್ತು ಮುಲ್ಲಾ ನಸ್ರುದ್ದೀನ್

ಒಂದು ದಿನ ಮುಲ್ಲಾ ನಸ್ರುದ್ದೀನ್ ಶ್ರೀಮಂತನೊಬ್ಬನ ಮನೆ ಎದುರು ಹಾದುಹೋಗುತ್ತಿದ್ದ. ಅವರ ಮನೆ ಚಾವಡಿಯಲ್ಲಿ ನೇತುಹಾಕಿದ್ದ ಚಿನ್ನದ ಪಂಜರದಲ್ಲಿ ಗಿಳಿಯೊಂದಿತ್ತು. ಅದು ಒಂದೇ ಸಮನೆ “ಸ್ವಾತಂತ್ರ್ಯ…. ಸ್ವಾತಂತ್ರ್ಯ” ಎಂದು ಕಿರುಚುತ್ತಿತ್ತು. ಇದನ್ನು ಕೇಳಿಸ ನಸ್ರುದ್ದೀನ್, ಆ ಗಿಳಿ, “ಪಾಪ ಆ ಗಿಳಿಯನ್ನು ಬಿಟ್ಟುಬಿಡುತ್ತೇನೆ. ಅದು ಸ್ವಾತಂತ್ರ್ಯ ಬಯಸುತ್ತಿದೆ” ಎಂದು ಯೋಚಿಸಿದ. ಅತ್ತಿತ್ತ ನೋಡಿ, ಯಾರೂ ಇಲ್ಲದ್ದನ್ನು ಖಾತ್ರಿಪಡಿಸಿಕೊಂಡು ನಿಧಾನವಾಗಿ ಪಂಜರದ ಬಾಗಿಲು ತೆರೆದ. ಗಿಳಿ ತನ್ನ ಪಾಡಿಗೆ ತಾನು ಹಾರಿಹೋಗುತ್ತದೆ ಎಂದು ಕಾದುನಿಂತ. ಆದರೆ ಆ ಗಿಳಿ […]

ಹೆರಾಕ್ಲೀಸ್ ನೆಮಿಯಾದ ಸಿಂಹವನ್ನು ಕೊಂದಿದ್ದು :  ಗ್ರೀಕ್ ಪುರಾಣ ಕಥೆಗಳು ~ 16

ಹೆರಾಕ್ಲೀಸ್ ಸಿಂಹದ ಶವವನ್ನು ಹೊತ್ತುತಂದು ಯೂರಿಸ್ತ್ಯೂಸನ ಎದುರು ಹಾಕಿದ. ಅದರ ಅಗಾಧ ದೇಹವನ್ನು ಕಂಡು ದೊರೆ ಹೆದರಿಹೋದ. ತನ್ನೆದುರು ಇರುವುದು ಸತ್ತ ಸಿಂಹದ ದೇಹವಾಗಿದ್ದರೂ ಅವನು ಬೆಚ್ಚಿಬಿದ್ದ. ಅವನಿಗೀಗ ಹೆರಾಕ್ಲೀಸನ ಮೇಲೆ ಭಯ ಶುರುವಾಯ್ತು.    ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಹೀರಾ ದೇವಿಯು ಸ್ಯೂಸ್ ದೇವನಿಗೆ ಭೂಮಿಯ ಹೆಣ್ಣಿನಲ್ಲಿ ಹುಟ್ಟಿದ ಮಗನೆಂದು ಹೆರಾಕ್ಲೀಸನ (ಹರ್ಕ್ಯುಲಸ್) ಮೇಲೆ ದ್ವೇಷ ತಾಳಿದ್ದಳು. ಅವಳು ಏನಾದರೂ ಮಾಡಿ ಅವನನ್ನು ಕೊಂದುಹಾಕಬೇಕೆಂದು ಬಯಸಿದ್ದಳು. ಆದರೆ ತಾನು ನೇರವಾಗಿ ಆ […]

ಸಿನಿಕತನ ಎಂಬ ತೀವ್ರವ್ಯಾಧಿಯನ್ನು ನಿವಾರಿಸಿ : ಸ್ವಾಮಿ ರಂಗನಾಥಾನಂದ

ಸಿನಿಕತನದಲ್ಲಿ ವಿಕಾಸದ ಪ್ರಗತಿಪರ ಪ್ರವಾಹವು ದಿಕ್ಕು ತಪ್ಪಿ ನಿಂತ ನೀರಾಗಿ ಪರ್ಯವಸಾನವಾಗುತ್ತದೆ. ಆ ನಿಂತ ನೀರೇ ಸ್ವಾರ್ಥ ಕೇಂದ್ರದ ವ್ಯಕ್ತಿತ್ವ…. ಅದು ನಿಜದಲ್ಲಿ ವ್ಯಕ್ತಿತ್ವವೇ ಅಲ್ಲ! ಬರ್ನಾಡ್ ಷಾ ನ ಮಾತುಗಳಲ್ಲಿ ಹೇಳುವುದಾದರೆ ಇದು, “ತನ್ನನ್ನು ಸುಖವಾಗಿಡಲು ಜಗತ್ತು ಪ್ರಯತ್ನಿಸುತ್ತಿಲ್ಲ ಎಂದು ಸದಾ ಗೊಣಗುತ್ತಿರುವ ರೋಗ, ದೂರುಗಳ ಮುದ್ದೆ” ~ ಸ್ವಾಮಿ ರಂಗನಾಥಾನಂದ ಸಿನಿಕತನದ ಫಲ ವ್ಯಕ್ತಿಯ ವ್ಯಕ್ತಿಯ ಆಧ್ಯಾತ್ಮಿಕ ಮರಣ. ಎಲ್ಲ ಮೌಲ್ಯಗಳನ್ನೂ ಅದು ಹೀನಾಯಿಸುತ್ತದೆ. ಎಲ್ಲ ಪಕ್ಕಾ ಐಹಿಕವಾದಕ್ಕೂ ಅಂತಿಮವಾಗಿ ಆಗುವ ಶಾಸ್ತಿ ಅದೇ. […]

ಗಗನದ ಮೇಲೊಂದು ಅಭಿನವ ಗಿಳಿ ಹುಟ್ಟಿ : ಅಲ್ಲಮನ ಬೆಡಗಿನ ವಚನಗಳು

ಗಗನದ ಮೇಲೊಂದು ಅಭಿನವ ಗಿಳಿ ಹುಟ್ಟಿ ಸಯಸಂಭ್ರಮದಲ್ಲಿ ಮನೆಯ ಮಾಡಿತ್ತು ಒಂದು ಗಿಳಿ ಇಪ್ಪತ್ತೈದು ಗಿಳಿಯಾಯಿತ್ತು. ಬ್ರಹ್ಮನಾಗಿಳಿಗೆ ಪಂಜರವಾದ; ವಿಷ್ಣುವಾಗಿಳಿಗೆ ಕೊರಕೂಳಾದ ರುದ್ರನಾಗಿಳಿಗೆ ತಾ ಕೋಲಾದ. ಇಂತೀ ಮೂವರ ಮುಂದಣ ಕಂದನ ನುಂಗಿ ದುಷ್ಟನಾಮ ನಷ್ಟವಾಯಿತ್ತು ಇದೆಂತೋ ಗುಹೇಶ್ವರ.   ಮಹಾಲಿಂಗರ ವ್ಯಾಖ್ಯಾನ : ಆತ್ಮ ಅಹಂಕಾರ ವಿಭ್ರಾಂತಿಯ ತೂರ್ಯಾವಸ್ಥೆಯಲ್ಲಿ ಜೀವಶುಕನು ಉದಯಿಸಿ ಸಂಸಾರ ಪ್ರಪಂಚದಲ್ಲಿ ನೆಲೆಸಿದನು. ಈ ಜೀವಶುಕನು ಇಪ್ಪತ್ತೈದು ಪ್ರಕೃತಿಗಳಿಂದ ಕೂಡಿದವನಾಗಿದ್ದನು (ಪಂಚವಿಂಶತಿ ಭೂತಾತ್ಮಕ). ಇವನಿಗೆ ರಜೋಗುಣದ ಸ್ಥೂಲ ಶರೀರವೇ ನಿವಾಸ ಸ್ಥಾನ. ಸಾತ್ತ್ವಿಕ […]

ಕೇಶಿ ಅಸುರನ ಸಂಹಾರ : ಕೃಷ್ಣನ ಬಾಲ ಲೀಲೆಗಳು #2

ಕೃಷ್ಣ ಮತ್ತವನ ಸ್ನೇಹಿತರು ಎಂದಿನಂತೆ ಹುಲ್ಲುಗಾವಲಿನಲ್ಲಿ ಹಸು ಕರುಗಳನ್ನು ಮೇಯಿಸುತ್ತ ಕುಳಿತಿದ್ದರು. ಇದ್ದಕ್ಕಿದ್ದ ಹಾಗೆ ಸಮೀಪದ ಹಳ್ಳಿಯಿಂದ ಜನರ ಕೂಗಾಟ ಕೇಳಿಬರಲಾರಂಭಿಸಿತು. ಅವರೆಲ್ಲರೂ ಹಳ್ಳಿಯ ಹೆಬ್ಬಾಗಿಲಿನ ಕಡೆ ಓಡಿದರು. ಅಲ್ಲೇನು ನೋಡೋದು!? ಪೂರಾ ಧೂಳು ಮುಸುಕಿಕೊಂಡಿದೆ! ಎರಡು ಸೇನೆಗಳು ವೃಂದಾವನದ ನಡು ಬೀದಿಯಲ್ಲಿ ನಿಂತು ಯುದ್ಧ ಮಾಡುತ್ತಿದ್ದಾರೋ ಅನ್ನುವಂತೆ ಕವಿದುಕೊಂಡಿದೆ… ಅವರೆಲ್ಲ ಅಚ್ಚರಿ – ಗಾಬರಿಗಳಿಂದ ನೋಡುತ್ತ ನಿಂತಿರುವಾಗಲೇ ದೊಡ್ಡದಾದ ಹೇಷಾವರ ಮೊಳಗಿತು. ಅದರ ಜೊತೆಗೇ ದೈತ್ಯಾಕಾರದ ಕುದುರೆಯೊಂದು ಕಾಣಿಸಿಕೊಂಡಿತು. ಅದರ ಹೆಸರು ಕೇಶಿ ಎಂದು. ಆ […]

ಬಾಬಾ ಫರೀದ್ ~ ಸೂಫಿ ಕಾವ್ಯ ಮತ್ತು ಕಿರುಪರಿಚಯ

ಬಾಬಾ ಫರೀದ್ ಉರ್ಫ್ ಬಾಬಾ ಶೇಖ್ ಫರೀದ್ ಉರ್ಫ್ ಖ್ವಾಜಿ ಫರೀದುದ್ದೀನ್ ಮಸೂದ್ ಗಂಜ್’ಶಕರ್. ಇವರು12ನೇ ಶತಮಾನದಲ್ಲಿ, ಪಂಜಾಬ್ ಪ್ರಾಂತ್ಯದಲ್ಲಿ ಜೀವಿಸಿದ್ದ ಸೂಫಿ ಸಂತ. ಪಂಜಾಬಿ ಸಾಹಿತ್ಯದ ಮೊದಲ ಕವಿ ಅನ್ನುವ ಮನ್ನಣೆಯೂ ಫರೀದ್’ಗೆ ಇದೆ.  ಸೂಫೀ ಚಿಂತನೆಗಳ ಪ್ರಚಾರಕ್ಕಾಗಿಯೇ ಫರೀದ್ ಪಾಕ್ ಪಟ್ಟಣವೆಂಬ ಊರು ಕಟ್ಟಿದ್ದ. ಅದೊಂದು ಸೂಫಿಸಮ್’ನ ವಿಶ್ವವಿದ್ಯಾನಿಲಯದಂತೆ ರೂಪುಗೊಂಡಿತ್ತು. ಬಾಬಾ ಫರೀದನ ಅನುಯಾಯಿಗಳು ಮುಂದೆ ‘ಚಿಶ್ತಿ’ಗಳೆಂದು ಹೆಸರಾದರು. ಸೂಫೀ ಪರಂಪರೆಯಲ್ಲಿ ಚಿಶ್ತಿಗಳದು ಬಹು ಮಹತ್ವದ ಹೆಸರು. ಬಾಬಾ ಫರೀದರ ಒಂದು ರಚನೆ  ಸತ್ತಂತಿರಬೇಡ, ಮೈಮರೆಯಬೇಡ. […]

ಮೂವರು ಮಾದರಿ ಮಾತೆಯರು : ಪುರಾಣದ ಪುಟಗಳಿಂದ…

  ಒಬ್ಬ ತಾಯಿ ಗರ್ಭದಲ್ಲೇ ಮಗುವಿಗೆ ಸಂಸ್ಕಾರ ನೀಡಲು ಬಯಸಿದರೆ, ಮತ್ತೊಬ್ಬ ತಾಯಿ, ತನ್ನ ಎಳೆಯ ಕಂದನಿಗೆ ಸತ್ಯಸಂಧತೆಯ ಮಹಾಪಾಠವನ್ನು ಸರಳವಾಗಿ ಬೋಧಿಸುತ್ತಾಳೆ. ಇನ್ನೂ ಒಬ್ಬ ತಾಯಿ ಸ್ವತಃ ತನ್ನ ಜೀವನದಿಂದಲೇ ಮಗುವಿಗೆ ಆದರ್ಶವಾಗುತ್ತಾಳೆ! ತಾಯಿ ತನ್ನ ಮಗುವಿನ ದೈಹಿಕ ಬೆಳವಣಿಗೆಗೆ ಮಾತ್ರವಲ್ಲ, ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೂ ಸಹಕರಿಸುತ್ತಾಳೆ. ಈ ನಿಟ್ಟಿನಲ್ಲಿ ಸ್ವತಃ ಅವಳ ಚಿಂತನೆಗಳು, ನಡೆನುಡಿಗಳು ಮಗುವಿನ ಮೇಲೆ ಪರಿಣಾಮ ಬೀರುತ್ತವೆ. ಗರ್ಭ ಧರಿಸಿದಾಗಿನಿಂದ ಮೊದಲ ನಾಲ್ಕು ವರ್ಷಗಳ ತನಕ ತಾಯಿಯಾದವಳು ಯಾವ ಬಗೆಯ […]

ನನಗೆ ಶಿಷ್ಯರಿಲ್ಲ, ನೀನು ನನ್ನನ್ನು ಗುರುವೆಂದು ಭಾವಿಸಬಹುದು : ರಮಣ ಧಾರೆ

ದೀರ್ಘಕಾಲದವರೆಗೆ ರಮಣ ಮಹರ್ಷಿಗಳ ಜೊತೆ ಇದ್ದು ಅಧ್ಯಾತ್ಮ ಸಾಧನೆ ಮಾಡಿದ ಮೇಜರ್ ಅಲನ್ ಡಬ್ಲ್ಯೂ. ಚಾಡ್ವಿಕ್ ಮತ್ತು ಭಗವಾನ್ ರಮಣ ಮಹರ್ಷಿಗಳ ನಡುವೆ ನಡೆದ ಸಂಭಾಷಣೆಯೊಂದರ ಭಾಗ ಇಲ್ಲಿದೆ. ನನಗೆ ಶಿಷ್ಯರಿಲ್ಲ ಎಂದು ರಮಣರು ಹೇಳುತ್ತಾರೆ. ಆಗ ಚಾಡ್ವಿಕ್’ರಿಗೆ ತಮ್ಮ ಗುರು ಯಾರು ಎಂಬ ಗೊಂದಲ ಉಂಟಾಗುತ್ತದೆ. ಅವರ ಗೊಂದಲವನ್ನು ರಮಣರ ಉತ್ತರ ಪರಿಹರಿಸುತ್ತದೆ. ಚಾಡ್ವಿಕ್ : ತಮಗೆ ಯಾವ ಶಿಷ್ಯಂದಿರೂ ಇಲ್ಲ ಎಂದು ಭಗವಾನರು ಹೇಳುತ್ತಾರಲ್ಲವೆ? ಭಗವಾನ್ : ಹೌದು. ಚಾಡ್ವಿಕ್ : ಆದರೆ ಯಾವುದೇ […]

ಬ್ರಹ್ಮನು ಗೋವು ಮತ್ತು ಗೋಪಬಾಲರನ್ನು ಕದ್ದ ಕಥೆ : ಕೃಷ್ಣನ ಬಾಲ ಲೀಲೆಗಳು #1

ಒಮ್ಮೆ ಬ್ರಹ್ಮ ದೇವನಿಗೆ ಅನೇಕಾನೇಕ ರಾಕ್ಷಸರನ್ನು ಕೊಂದ ಕೃಷ್ಣ ಎಂದು ಕರೆಯಲ್ಪಡುವ  ಪುಟ್ಟ ಬಾಲಕ ಯಾರೆಂದು ತಿಳಿಯುವ ಕುತೂಹಲ ಉಂಟಾಗುತ್ತದೆ. ಒಂದು ದಿನ ಅವನು ತನ್ನ ಲೋಕದಿಂದ ಹೊರಟು ಭೂಮಿಗೆ ಬರುತ್ತಾನೆ. ಕೃಷ್ಣ ಮತ್ತಿತರ ಗೋಪಬಾಲರು ದನ ಮೇಯಿಸುತ್ತಿದ್ದ ಕಾಡಿನಲ್ಲಿ ಅಡ್ಡಾಡುತ್ತಾನೆ. ಅದು ಮಧ್ಯಾಹ್ನದ ಸಮಯ. ಗೋಪ ಬಾಲರು ತಾವು ತಂದ ಬುತ್ತಿಯನ್ನು ಬಿಚ್ಚಿ ತಿನ್ನುತ್ತ ಇರುತ್ತಾರೆ. ಬಳಿಯಲ್ಲೆ ತಂಪಾದ ಝರಿ ಹರಿಯುತ್ತಿರುತ್ತದೆ. ಹಸು ಕರುಗಳು ದಟ್ಟವಾಗಿ ಬೆಳೆದಿದ್ದ ಹಸಿರು ಹುಲ್ಲನ್ನು ಮೇಯುತ್ತ ಮೇಯುತ್ತ ಕಾಡಿನ ಗರ್ಭದೊಳಕ್ಕೆ […]

ಬಂಡೆ ಮನಸ್ಸಿನ ಒಳಗಿದೆಯೋ ಹೊರಗಿದೆಯೋ?

ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ ಒಬ್ಬ ಝೆನ್ ಮಾಸ್ಟರ್ ಮತ್ತು ಅವನ ಶಿಷ್ಯ ಒಂದು ಪರ್ವತ ಶ್ರೇಣಿಯ ಮೂಲಕ ಹಾಯ್ದು ಮುಂದಿನ ಊರಿಗೆ ಹೋಗುತ್ತಿದ್ದರು. ದಾರಿಯುದ್ದಕ್ಕೂ ಮಾಸ್ಟರ್ ಮೌನವಾಗಿದ್ದ ಆದರೆ ಅವನ ಶಿಷ್ಯ ಮಾತ್ರ ಝೆನ್ ಬಗ್ಗೆ ಮತ್ತು ಮನಸ್ಸಿನ ಬಗ್ಗೆ ಸತತವಾಗಿ ಮಾತಾನಾಡುತ್ತಲೇ ಇದ್ದ. ಸ್ವಲ್ಪ ದೂರ ಕ್ರಮಿಸಿದ ನಂತರ ಅವರಿಬ್ಬರಿಗೂ ಒಂದು ಭಾರಿ ಬಂಡೆ ಎದುರಾಯಿತು. ಮಾಸ್ಟರ್ ತನ್ನ ಶಿಷ್ಯನ ತಲೆ ಮೇಲೆ ಕೈಯ್ಯಾಡಿಸುತ್ತ ಕೇಳಿದ, “ ನೋಡು ಆ ಭಾರಿ […]