ಬ್ರಹ್ಮಜ್ಞಾನವೆಂದರೆ ಸುಖ ಸಂತೋಷಗಳನ್ನು ಪಡೆಯುವುದಲ್ಲ : ರಮಣ ಧಾರೆ

ವಾಸ್ತವದಲ್ಲಿ ಸುಖ ಸಂತೋಷಗಳು ನಮ್ಮ ಸಹಜ ಸ್ವಭಾವವೇ ಆಗಿವೆ. ಅದು ನಮ್ಮ ಆತ್ಮವೇ ಆಗಿದೆ. ಅದನ್ನು ಪ್ರತಿಯೊಬ್ಬರೂ ಹುಡುಕುತ್ತಾರೆ, ಕಾರಣ ಅದು ಅವರ ಸ್ವಭಾವ. ಅದು ಅವರ ಆಜನ್ಮಹಕ್ಕು. ಅದನ್ನು ಅವರು ಕಾಣದೇ ಇರಲು ಕಾರಣ, ಅವರು ಯಾವಾಗಲೂ ತಮ್ಮಿಂದ ಹೊರಗೆ ಅದನ್ನು ಹುಡುಕುವುದೇ ಆಗಿದೆ. ಬ್ರಹ್ಮಜ್ಞಾನವೆಂಬುದು ಸಂಪಾದಿಸುವ ವಿದ್ಯೆಯಲ್ಲ. ಬ್ರಹ್ಮಜ್ಞಾನ ಪಡೆಯುವುದರಿಂದ ಸುಖ ಸಂತೋಷಗಳು ಸಿಗುತ್ತವೆ ಎಂದು ನೀವು ಭಾವಿಸುತ್ತೀರಿ. ಇದೊಂದು ತಪ್ಪು ಗ್ರಹಿಕೆ. ನಿಮ್ಮೊಳಗಿರಬಹುದಾದ ಈ ತಪ್ಪುಗ್ರಹಿಕೆ ಹತ್ತು ಜನ ಪೆದ್ದರು ನದಿ ದಾಟಿದಂತಿದೆ. […]

ನಿಂತು ನಾರುವಿಕೆಯ ಅಪಾಯಗಳು : ಸ್ವಾಮಿ ರಂಗನಾಥಾನಂದ

ಯಾರು ಸಂಪೂರ್ಣವಾಗಿ ಇಂದ್ರಿಯ ಜಗತ್ತಿನಲ್ಲಿ ಮುಳುಗಿಹೋಗಿದ್ದಾರೋ ಅವರು ಸ್ವಲ್ಪವೂ ಶ್ರಮಿಸುವುದಿಲ್ಲ. ವೇದಾಂತವು ಅದನ್ನು ಆಧ್ಯಾತ್ಮಿಕ ಅಂಧತೆಯ ಸ್ಥಿತಿ ಎಂದು ಕರೆಯುತ್ತದೆ. ಅಂಥವರು ಕತ್ತಲೆಯಲ್ಲಿ ಬಾಳುತ್ತಾರೆ. ಅದರಲ್ಲೇ ಸುಖ ಕಾಣುತ್ತಾರೆ. ಬಂಧನದಲ್ಲಿದ್ದರೂ ಅದನ್ನೇ ಅನುಕೂಲವೆಂದು ಭಾವಿಸುತ್ತಾರೆ. ಕಠೋಪನಿಷತ್ತು ಇಂಥವರಿಗಾಗಿಯೇ “ಉತ್ಥಿಷ್ಠತ ಜಾಗ್ರತ!! ಪ್ರಾಪ್ಯವರಾನ್ನಿಬೋಧತ” ಎಂದು ಕರೆ ನೀಡುತ್ತದೆ. ಮಾನವೇತರ ಜೀವಿಗಳಿಗೆ ನಿಂತು ನಾರುವಿಕೆಯ ಅಪಾಯಗಳ ಅರಿವು ಇರುವುದಿಲ್ಲ. ತಾವಾಗಿಯೇ ಈ ಸಮಸ್ಯೆಯನ್ನು ರೂಪಿಸಿಕೊಳ್ಳುವ ಮೂಲಭೂತವಾದ ಶಕ್ತಿಯಾಗಲೀ ಅದಕ್ಕೆ ಪರಿಹಾರವನ್ನು ಕಂಡುಹಿಡಿಯುವ ಶಕ್ತಿಯಾಗಲೀ ಅವಕ್ಕೆ ಇಲ್ಲ. ಅವು ಈ ವಿಷಯದಲ್ಲಿ […]

ತಾವೋ ತಿಳಿವು #34 ~ ಯಾರೊಂದಿಗೂ ಸ್ಪರ್ಧೆಯಿಲ್ಲ…

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಎಲ್ಲ ಧಾರೆಗಳೂ ಸಮುದ್ರದತ್ತ ಹರಿಯುತ್ತವೆ. ಏಕೆಂದರೆ ಸಮುದ್ರ , ಕೆಳಗೆ ನಿಂತು ಕರೆಯುತ್ತದೆ. ಈ ವಿನಯವೇ ಸಮುದ್ರದ ಶಕ್ತಿ. ಜನರನ್ನು ಆಳಬೇಕೆನ್ನುವವರು ಅವರಿಗಿಂತ ಎರಡು ಹೆಜ್ಜೆ ಕೆಳಗೆ ನಿಲ್ಲಿ. ಜನರನ್ನು ಮುನ್ನಡೆಸಬೇಕೆನ್ನುವವರು ಅವರಿಗಿಂತ ಎರಡು ಹೆಜ್ಜೆ ಹಿಂದೆ ನಡೆಯಿರಿ. ತಾವೋ, ಮೇಲೆ ನಿಂತು ಮಾತಾಡುವಾಗಲೂ ಜನರಿಗೆ ಕೀಳರಿಮೆ ಕಾಡುವುದಿಲ್ಲ; ಮುಂದೆ ನಡೆಯುತ್ತಾ ಮುನ್ನಡೆಸುವಾಗಲೂ ಹಾದಿ ತಪ್ಪುವ ಭಯವಿರುವುದಿಲ್ಲ. ತಾವೋಗೆ ಯಾರೊಂದಿಗೂ ಸ್ಪರ್ಧೆಯಿಲ್ಲ ಅಂತಯೇ ತಾವೋ […]

ಹಾಲು ಕುಡಿದು ಮಲಗಿದರೆ ನಶೆ ಏರುವುದು ಹೇಗೆ?

ಮುಲ್ಲಾ ನಸ್ರುದ್ದೀನ್ ಯಾವತ್ತಿನಂತೆ ತನ್ನ ಕತ್ತೆಯನ್ನೇರಿ ಎಲ್ಲಿಗೋ ಹೋಗುತ್ತಿದ್ದ. ದಾರಿಯಲ್ಲಿ ಹಾಲು ಮಾರುವಾತ ಎದುರಾದ. ಆತ ಯಾವುದೋ ಚಿಂತೆಯಲ್ಲಿದ್ದ. ಆತ ನಸ್ರುದ್ದೀನನನ್ನು ತಡೆದು, “ನನಗೊಂದು ಸಮಸ್ಯೆ ಇದೆ. ದಯವಿಟ್ಟು ಪರಿಹಾರ ಹೇಳು” ಎಂದು ಕೇಳಿದ. ಅವನು ಹೆಗಲ ಮೇಲೆ ಹೊತ್ತುಕೊಂಡಿದ್ದ ಅಡ್ಡ ಕೋಲಿನ ಎರಡೂ ತುದಿಗಳಿಗೆ ಕಟ್ಟಿದ ಮಡಿಕೆಯ್ಲಲಿ ಹಾಲಿತ್ತು. ನಸ್ರುದ್ದೀನ್ ಉದಾರ ಬುದ್ಧಿ ತೋರಿ “ಅದೇನು ಸಮಸ್ಯೆ ಹೇಳು ನೋಡೋಣ” ಅಂದ.  “ಬೆಳಗ್ಗೆ ನಿದ್ದೆಯಿಂದ ಎದ್ದಾಗ ನಶೆಯಲ್ಲಿರುವ ಭಾವನೆ ಉಂಟಾಗುತ್ತದೆ. ತಲೆಸುತ್ತುವುದರ ಜೊತೆಗೆ ಕುಡಿತದ ನಶೆ […]

Rumor ಎಂಬ ಸುದ್ದಿ ದೇವತೆ: ಗ್ರೀಕ್ ಪುರಾಣ ಕಥೆಗಳು ~ 13

ಗಾಳಿಸುದ್ದಿಯನ್ನು ‘ರೂಮರ್’ ಅಂತಲೇ ಕರೆದು ಯಾಕೆ ಗೊತ್ತೆ? ಅದರ ಹಿಂದೊಂದು ಗ್ರೀಕ್ ಪುರಾಣ ಕಥೆಯಿದೆ! ರೂಮರ್, ಭೂದೇವಿ ಗೈಯಾ ಮತ್ತು ಸ್ವರ್ಗದ ದೇವತೆ ಒರನೋಸರ ಕಿರಿಯ ಮಗಳು. ಇವಳಿಗೆ ಫೆಮೆ, ಫಮಾ ಎಂಬ ಹೆಸರುಗಳೂ ಇದ್ದವು. ರೂಮರ್ ಮಹಾನ್ ಮಾತಿನ ಮಲ್ಲಿ. ಅವಳ ಮಾತಿನ ಚಟ ಎಷ್ಟೆಂದರೆ, ಯಾವಾಗಲೂ ಅಲ್ಲಿಯದನ್ನು ಇಲ್ಲಿಗೆ, ಇಲ್ಲಿಯದನ್ನು ಅಲ್ಲಿಗೆ ಹೇಳುತ್ತ ಇರುತ್ತಿದ್ದಳು. ಅವಳ ಈ ವ್ಯಸನವನ್ನು ಸರಿದಾರಿಯಲ್ಲಿ ನಡೆಸಲು ಅವಳಿಗೆ ಸ್ಯೂಸ್ ಮಹಾದೇವನು ಸುದ್ದಿ ದೇವತೆಯ ಸ್ಥಾನವನ್ನು ನೀಡಿದನು. ರೂಮರ್ ಗೆ […]

ತಾವೋ ತಿಳಿವು #33 ~ ಇಲ್ಲಿ ಸಿದ್ಧಿ ಅಸಾಧ್ಯ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ತಾವೋ ಬ್ರಹ್ಮಾಂಡದ ಚುಕ್ಕಾಣಿ, ಒಳಿತಿಗಾಗಿ ಕಾಯುತ್ತಿರುವ ನಿಧಿ, ಕೆಡಕು ಶರಣಾಗುವ ಜಾಗ. ಸಿಹಿ ಮಾತುಗಳಿಂದ ಮನ್ನಣೆ ಸತ್ಕಾರ್ಯಗಳಿಂದ ಸ್ಥಾನ ಮಾನ ಸಾಧ್ಯ. ಆದರೆ, ತಾವೋಗೆ ಮೌಲ್ಯಗಳ ಹಂಗಿಲ್ಲ; ಅಂತೆಯೇ ಇಲ್ಲಿ ಸಿದ್ಧಿ ಅಸಾಧ್ಯ. ಹೊಸ ನಾಯಕ ಕಾಣಿಸಿಕೊಂಡಾಗ ಅವನಿಗೆ ಸಂಪತ್ತು, ಅನುಭವ ಧಾರೆಯೆರೆಯದಿರಿ. ಬದಲಾಗಿ, ತಾವೋ ಕಾಣಿಸಿ. ಸಂತರಿಗೆ ತಾವೋ ಯಾಕೆ ಆಪ್ಯಾಯಮಾನ? ಯಾಕೆಂದರೆ ಅವರು ಹುಡುಕಿದ್ದನ್ನು ಕಂಡುಕೊಳ್ಳುತ್ತಾರೆ, ಎಡವಿದಾಗ ಸಂತೈಸಲ್ಪಡುತ್ತಾರೆ, ಹಾಗೆಂದೇ ತಾವೋ […]

ಸುಖ ದುಃಖಗಳು ನಮ್ಮೊಳಗೇ ಇವೆ

ಒಮ್ಮೆ ಒಬ್ಬ ಸೂಫಿ ಸಂತ ರಾಜನಿಗೆ , “ನಾವು ಸುಖ ದುಃಖಗಳನ್ನು ಬೇರೆಯವರಲ್ಲಿ ಹುಡುಕುತ್ತೇವೆ. ವಾಸ್ತವದಲ್ಲಿ ಅವೆಲ್ಲವೂ ನಮ್ಮೊಳಗೇ ಇದೆ” ಎಂದು ಬೋಧಿಸುತ್ತಿದ್ದ. ರಾಜ ಅದನ್ನು ಒಪ್ಪಲಿಲ್ಲ. ಸಂತ ಅದನ್ನು ಸಾಬೀತುಪಡಿಸಲು ಮುಂದಾದ. “ನಿನ್ನ ರಾಜ್ಯದ ಆರೋಗ್ಯವಂತ ಯುವ ಗೃಹಸ್ಥನನ್ನು ಕರೆಸಿ, ಆರು ತಿಂಗಳು ಅವನನ್ನು ಒಂಟಿಯಾಗಿಡು, ಅನಂತರ ಮಾತಾಡೋಣ” ಅಂದ. ರಾಜ ಹಾಗೆಯೇ ಮಾಡಿದ. ನಾಲ್ಕು ದಿನ ತಿಂದುಂಡು ಸುಖವಾಗಿದ್ದ ಯುವ ಗೃಹಸ್ಥ, ಐದನೇ ದಿನಕ್ಕೆ ಗೋಳಿಡತೊಡಗಿದ. ಅವನ ಒಳಗಿನದೇ ಚಿಂತೆಗಳು ಅವನನ್ನು ಮುತ್ತಿ ತಿನ್ನತೊಡಗಿದ್ದವು. […]

ಬದುಕು ವೈರುಧ್ಯಗಳ ಮೊತ್ತ : ಓಶೋ ಚಿಂತನೆ

ಯೋಚಿಸುವುದು ಎಂದರೆ ಲೋಲಕದ ಆವೇಗದ ಹಾಗೆ. ಯೋಚಿಸಲು ಆರಂಭಿಸಿದ ಕೂಡಲೇ ಮನಸ್ಸು ವಿರುದ್ಧ ದಿಕ್ಕಿಗೆ ವ್ಯವಸ್ಥೆಗೊಳಿಸಲು ಆರಂಭಿಸುತ್ತದೆ. ಆದ್ದರಿಂದಲೇ ಗೆಳೆಯರು ಮಾತ್ರವೇ ಶತ್ರುಗಳಾಗಬಲ್ಲರು. ಮೊದಲು ಗೆಳೆಯರಾಗಿಲ್ಲದಿದ್ದರೆ, ಇದ್ದಕ್ಕಿದ್ದ ಹಾಗೆ ಶತ್ರುವಾಗಲು ಸಾಧ್ಯವಿಲ್ಲ ~ ಓಶೋ ರಜನೀಶ್ ಮನಸ್ಸಿನ ಸಮತೋಲನ ಕಾಯ್ದುಕೊಳ್ಳುವುದು ನಮಗೆ ಅತ್ಯಂತ ಕಷ್ಟವೆಂದೇ ತೋರುತ್ತದೆ. ಒಂದು ವಿಚಾರದಿಂದ ಇನ್ನೊಂದು ವಿಚಾರಕ್ಕೆ ಸಾಗುವುದು ಅತ್ಯಂತ ಸುಲಭ. ಒಂದು ಧ್ರುವದಿಂದ ಇನ್ನೊಂದಕ್ಕೆ ಸಾಗುವುದು ಮನಸ್ಸಿನ ಲಕ್ಷಣ. ನೀವು ಸಮತೋಲನದಿಂದಿದ್ದರೆ, ಮನಸ್ಸು ಕಣ್ಮರೆಯಾಗುತ್ತದೆ. ನೀವು ಅಸಮತೋಲನಗೊಂಡಾಗ ಅದು ಅಲ್ಲಿರುತ್ತದೆ, ಉದಾಹರಣೆಗೆ […]

ಝೆನ್ ಶೈಲಿಯಲ್ಲಿ ಬದುಕುವುದೆಂದರೆ…

ಟೆನ್ನೋ ಎನ್ನುವವನೊಬ್ಬ ಝೆನ್ ಕಲಿಯಲು ಗುರು ನ್ಯಾನ್ ಇನ್ ಬಳಿ ಬಂದ. ಝೆನ್ ಕಲಿಯುವವರು ಗುರುವಿನೊಟ್ಟಿಗೆ ಎರಡು ವರ್ಷ ಕಳೆಯಬೇಕಾಗಿತ್ತು. ಟೆನ್ನೋ ಹಾಗೆ ನ್ಯಾನ್ ಇನ್ ಜೊತೆಗೇ ಇದ್ದು ಝೆನ್ ಕಲಿತ. ತಾನಿನ್ನು ಬೋಧನೆ ಶುರು ಮಾಡಬಹುದು ಅನ್ನಿಸಿತು ಅವನಿಗೆ. ಆಶ್ರಮವನ್ನು ಬಿಟ್ಟು ಹೊರಡಲು ಸಿದ್ಧತೆ ಮಾಡಿಕೊಂಡ. ನ್ಯಾನ್ ಇನ್ ಆಶ್ರಮದಿಂದ ಸ್ವಲ್ಪ ದೂರವಿದ್ದ ಬೋಧನಾ ಕೊಠಡಿಯಲ್ಲಿ ಕುಳಿತಿದ್ದ. ಅವನನ್ನು ಕಾಣಲು ಟೆನ್ನೋ ಕಾಲಿಗೆ ಮರದ ಚಡಾವುಗಳನ್ನು ಧರಿಸಿ, ಚತ್ರಿಯನ್ನು ಹಿಡಿದು ಹೊರಟ. ಒಳಗೆ ಹೋಗುವ ಮೊದಲು […]

ತಾವೋ ತಿಳಿವು #32 ~ ಅನಾಮಧೇಯತೆಯೇ ನನ್ನ ವಿಳಾಸ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ನನ್ನ ಮಾತು ತುಂಬಾ ಸರಳ ತಿಳಿಯಲು ಮತ್ತು ಬಳಸಲು ಕೂಡ. ಆದರೂ ಜನ ಹಿಂಜರಿಯುತ್ತಾರೆ. ನನ್ನ ಮಾತು, ಪೂರ್ವಜರಿಂದ ಕೃತಿ, ಸಾಧನೆಯಿಂದ, ಸಿದ್ಧಿಯಿಂದ. ಇವುಗಳ ಅನುಪಸ್ಥಿತಿ ಎಂದರೆ ನನ್ನ ಗೈರು ಹಾಜರಿ ಕೂಡ. ಅನಾಮಧೇಯತೆಯೇ ನನ್ನ ವಿಳಾಸ.