ಅಂಬಿಗರ ಚೌಡಯ್ಯನ ವಚನಗಳು : ಅರಳಿಮರ Posters

ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದ ಶಿವಶರಣರ ಮಧ್ಯದಲ್ಲಿ ಪ್ರಜ್ವಲವಾಗಿ ಬೆಳಗಿದ ಶರಣನೆಂದರೆ ಅಂಬಿಗರ ಚೌಡಯ್ಯ. ಮಾತು ಕಟುವಾದರೂ ದಿಟವನ್ನೆ ನುಡಿದ ದಿಟ್ಟನೀತ, ನುಡಿದಂತೆ ನಡೆದವನು, ನಡೆದಂತೆ ನುಡಿದವನು ಅಂಬಿಗರ ಚೌಡಯ್ಯ. ನಿಜಾರ್ಥದಲ್ಲಿ ಒಬ್ಬ ಬಂಡುಕೋರ, ಕ್ರಾಂತಿಕಾರಿ ಶರಣ, ನಿಷ್ಟೂರ ಮನುಷ್ಯ. ಎಲ್ಲಾ ಶರಣರಂತೆ ಈತ ಕಾಯಕಯೋಗಿ ದೋಣಿ ನಡೆಸುವುದು ಅವನ ಕಾಯಕವಾಗಿತ್ತು. ..

ಶೋಷಣೆ ಮಾಡುವುದೆಂದರೆ ಶೋಷಣೆಗೆ ಒಳಗಾಗುವುದು : ‘ಜಿಡ್ಡು’ ಚಿಂತನೆ

ನಿಮಗೆ ಏನೋ ಸಾಧಿಸಬೇಕೆಂಬ ಅಥವಾ ನಾನೂ ಏನೂ ಅಲ್ಲ ಎಂಬ ಭಯದಿಂದ ಪಾರಾಗಬೇಕೆಂಬ ಬಯಕೆಯಿರುವುದರಿಂದ ನೀವು ಒಂದು ಸಂಘಟನೆಯನ್ನು ಸೇರುವ, ಒಂದು ಸಿದ್ಧಾಂತಕ್ಕೆ ಬದ್ಧರಾಗುವ, ಒಂದು ಧರ್ಮವನ್ನು ನಂಬುವ ಹುಕಿಗೆ ಶರಣಾಗುತ್ತೀರಿ. ~ ಜಿಡ್ಡು ಕೃಷ್ಣಮೂರ್ತಿ । ಕನ್ನಡಕ್ಕೆ: ಚಿದಂಬರ ನರೇಂದ್ರ

ಸುಮ್ಮನೆ ಸಿದ್ಧಿ ಸಿದ್ಧಿ ಅನ್ನುತ್ತಿದ್ದರೆ ಅಮಲೇರುವುದೇ? : ಪರಹಂಸ ವಿಚಾರಧಾರೆ

ಶ್ರೀರಾಮಕೃಷ್ಣ ಪರಮಹಂಸರು ಮತ್ತು ಮಾರ್ವಾಡಿ ಭಕ್ತರ ನಡುವೆ ನಡೆದ ಆಧ್ಯಾತ್ಮಿಕ ಪ್ರಶ್ನೋತ್ತರ ಸಂಭಾಷಣೆಯ ತುಣುಕು ಇಲ್ಲಿದೆ. “ಶಾಸ್ತ್ರಗಳನ್ನೇನೊ ಓದುತ್ತೇವೆ, ಆದರೂ ಜೀವನ ಮಾರ್ಪಾಟು ಹೊಂದುತ್ತಿಲ್ಲವಲ್ಲ?” ಅನ್ನುವ, ಈಗಿನ ನಾವು ಈ ಕಾಲಕ್ಕೂ ಕೇಳಿಕೊಳ್ಳುತ್ತಿರುವ ಪ್ರಶ್ನೆಗೂ ಉತ್ತರ ಇಲ್ಲಿದೆ । ಆಕರ ಕೃಪೆ: ‘ಎಮ್’ ಎಂದೇ ಖ್ಯಾತರಾದ ಮಾಸ್ಟರ್ ಮಹಾಶಯರು ದಾಖಲಿಸಿ ಸಂಕಲಿಸಿದ ಶ್ರೀರಾಮಕೃಷ್ಣ ವಚನವೇದ

ಚೆರ್ರಿ ಮರವೇರಿದ ಬಸವನ ಹುಳು : ಓಶೋ ವ್ಯಾಖ್ಯಾನ

ಭಗವಂತ ಇಲ್ಲವೆಂದು ವಾದ ಮಾಡುತ್ತ ಕುಳಿತುಕೊಳ್ಳಬೇಡ, ವಾದ ಮಾಡುತ್ತ ನಿನ್ನ ಸಮಯ, ಸಾಮರ್ಥ್ಯ ವ್ಯರ್ಥ ಮಾಡುವುದರ ಬದಲಾಗಿ ಸಾಧನೆಯ ಹಾದಿಯಲ್ಲಿ ಮುಂದುವರೆಯುತ್ತ ಬದಲಾವಣೆಗೆ ನಿನ್ನನ್ನು ನೀನು ತೆರೆದುಕೋ, ಆಗ ನಿನ್ನನ್ನು ಈಗ ಇಲ್ಲದಿರುವ ಭಗವಂತ ಬೇರೆ ಯಾವುದೋ ಶಕ್ತಿಯ ರೂಪದಲ್ಲಿ ಬಂದು ಸ್ವಾಗತಿಸುತ್ತಾನೆ ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ

“ನಾನು ಯಾರು?” : ಶ್ರೀ ರಮಣರೊಡನೆ ಸಂಭಾಷಣೆ

ಶಿವಪ್ರಕಾಶಂ ಪಿಳ್ಳೈಯವರ  ಸಂದೇಹಗಳಿಗೆ ರಮಣ ಮಹರ್ಷಿಗಳು ಲಿಖಿತರೂಪದಲ್ಲಿ ನೀಡಿದ ಉತ್ತರಗಳನ್ನು ಸಂಕಲಿಸಿ ‘ನಾನು ಯಾರು?’ ಎಂಬ ಕಿರುಹೊತ್ತಿಗೆಯನ್ನು ಪ್ರಕಟಿಸಲಾಗಿದೆ. ಡಾ. ಕೆ.ಎ. ನಾರಾಯಣನ್ ಕನ್ನಡಕ್ಕೆ ಅನುವಾದಿಸಿದ ಈ ಸಂಗ್ರಹದ ಆಯ್ದ ಭಾಗ ಇಲ್ಲಿದೆ. (ಇಂದು ಶ್ರೀ ರಮಣ ಜಯಂತಿ)

ಅತೀಂದ್ರಿಯ ಶಕ್ತಿಗಳು ನಿರರ್ಥಕ : ಶ್ರೀ ರಮಣ ವಿಚಾರಧಾರೆ

ಮಹರ್ಷಿಗಳ ಪ್ರಭಾವಕ್ಕೆ ಸಿಲುಕಿದ್ದ ಮೊದಲನೆಯ ಪಾಶ್ಚಾತ್ಯ ಯುವ ಅನ್ವೇಷಕ ಎಫ್‌.ಎಚ್‌. ಹಂಫ್ರಿಸ್‌, ಮತಧರ್ಮಗಳ  ಶ್ರದ್ಧಾಪೂರ್ವಕ ಅಭ್ಳಾಸಿಯಾಗಿದ್ದ. ಪವಾಡದ ಶಕ್ತಿಗಳು ಅವನಲ್ಲಿ ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತಲೇ ಅವನು ಸಿದ್ಧಿಗಳ ಬಗ್ಗೆ ತಿಳಿದುಕೊಳ್ಳಲು ಕುತೂಹಲಿಯಾಗಿದ್ದ. ಮಹರ್ಷಿಗಳು ಈ ಕುತೂಹಲಕ್ಕೆ ಪ್ರೋತ್ಸಾಹ ಕೊಡಲಿಲ್ಲ. ಈ ಸಂದರ್ಭದಲ್ಲಿ ಅವರು ನೀಡಿದ ಬೋಧನೆಗಳಿವು… ~ ಕೃಪೆ: ರಮಣ ಮಹರ್ಷಿ; ಕೆ. ಸ್ವಾಮಿನಾಥನ್ । ಕನ್ನಡಕ್ಕೆ: ಎನ್.ಬಾಲಸುಬ್ರಹ್ಮಣ್ಯ