ದಾರ್ಶನಿಕ ಋಷಿ ಅಪಾಲೆಯ ಯಶೋಗಾಥೆ

ಸಾಧಕರಿಗೆ ಸಾವಿರ ಅಡ್ಡಿ ಅನ್ನುವಂತೆ ಕೇಡಿನ ಮಳೆ ಸುರಿಯಿತು. ಸಮೀಪದ ನದಿ ತುಂಬಿ ಹರಿದು ನೆರೆ ಬಿದ್ದಿತು. ಧ್ಯಾನಸ್ಥಳಾಗಿ ಕುಳಿತಿದ್ದ ಅಪಾಲಾಳನ್ನು ಕೊಚ್ಚಿಕೊಂಡು ಹರಿಯತೊಡಗಿತು. ಎಚ್ಚರಗೊಂಡ ಅಪಾಲೆ ಮುಂದಿನ ನಡೆಯನ್ನು ಯೋಚಿಸತೊಡಗಿದಳು ~ ಚೇತನಾ ತೀರ್ಥಹಳ್ಳಿ ಕನ್ಯಾವಾರವಾಯತೀ ಸೋಮಮಪಿ ಸೃತಾವಿದತ್ | ಅಸ್ತಮ್ ಭರನ್ತ್ಯ ಬ್ರವೀದಿನ್ದ್ರಾಯ ಸುನವೈ ತ್ವಾ ಶಕ್ರಾಯ ಸುನವೈ ತ್ವಾ || 8:91:1 || ಇಲ್ಲಿ ಸೋಮರಸವನ್ನು ಅರ್ಪಿಸಿ ಇಂದ್ರನನ್ನು ಒಲಿಸಿಕೊಂಡು ತನಗೆ ಬೇಕಾದ ವರಗಳನ್ನು ಪಡೆದ ಮಹಾ ಸಾಧಕಿ, ಋಷಿಕೆ ಅಪಾಲೆಯ ಬಗ್ಗೆ […]

ಅತ್ಯಾಚಾರಕ್ಕೊಳಗಾದ ಅರಹಂತೆ ಮತ್ತು ಬುದ್ಧನ ವೈಶಾಲ್ಯತೆ : ಉತ್ಪಲಾವರ್ಣೆಯ ಕಥೆ

ಉತ್ಪಲಾವರ್ಣೆ ಬಿಕ್ಖುಣಿಯಾದುದು ಶ್ರೀಮಂತನ ದಾಯಾದಿಗಳಿಗೆ ಸರಿ ಕಾಣಲಿಲ್ಲ. ತಮ್ಮ ಮನೆತನದ ಹೆಣ್ಣು ಕೂದಲು ಬೋಳಿಸಿಕೊಂಡು ಸನ್ಯಾಸಿನಿಯಾಗುವುದನ್ನು ಅವರು ಸಹಿಸಲಿಲ್ಲ. ಏನಾದರೂ ಮಾಡಿ ತಮ್ಮ ಅಸಮಾಧಾನವನ್ನು ಸ್ಪಷ್ಟಪಡಿಸಬೇಕು ಮತ್ತು ಮನೆತನದ ಮರ್ಯಾದೆ ತೆಗೆದುದಕ್ಕೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಅವರು ನಿರ್ಧರಿಸಿದರು. ಅವರಲ್ಲೊಬ್ಬ ಸಮಯಸಾಧಿಸಿ ಅವಳ ಮೇಲೆ ಅತ್ಯಾಚಾರವನ್ನೆಸಗಿಯೂ ಬಿಟ್ಟ…. ~ ಚೇತನಾ ತೀರ್ಥಹಳ್ಳಿ ಶ್ರಾವಸ್ತಿ ಶ್ರೀಮಂತ ನಗರ. ಆ ನಗರದಲ್ಲೊಬ್ಬ ಶ್ರೀಮಂತ ವ್ಯಾಪಾರಿ. ಅವನಿಗೊಬ್ಬಳು ಮಗಳಿದ್ದಳು. ಹೆಸರು ಉತ್ಪಲಾವರ್ಣಾ. ಆ ಹೆಸರನ್ನು ಅವಳಿಗೆ ಅನ್ವರ್ಥಕವಾಗಿಯೇ ಇಟ್ಟಿದ್ದರು. ನೀಲಿ ಕಮಲದಂತೆ […]

ಎಲ್ಲ ಆಧ್ಯಾತ್ಮಿಕ ಅನ್ವೇಷಣೆಗಳ ಅಂತಿಮ ನೆಲೆ ಯಾವುದು?

ಸತ್ಯ ಎನ್ನುವ ಕಲ್ಪನೆಯಲ್ಲಿ ಎಲ್ಲವೂ ಅಡಗಿದೆ. ಅದನ್ನ ಕಾಣುವ ವಿಧಾನ ಮಾತ್ರ ಭಿನ್ನವಾದುದು. ಅಂತಿಮ ಸತ್ಯವನ್ನು ಅರಸುತ್ತಾ ಹೋಗುವವರಿಗೆ, ಅಂಥದೊಂದಿದೆ ಎಂಬ ಅರಿವು ಇದೆಯಲ್ಲ, ಅದೇ ಅತ್ಯಂತ ವಿಸ್ಮಯದ ಅರಿವು. ಇದರ ಉತ್ತರ, ವಿಭಿನ್ನ ದೃಷ್ಟಿಕೋನಗಳಿಗೆ ಅನುಗುಣವಾಗಿ ಭಿನ್ನಭಿನ್ನವಾಗಿ ಕಂಡುಬರುತ್ತದೆ. ಸಾಧಕನ ಇಷ್ಟದೇವತೆಯಿರಲಿ, ಎಲ್ಲ ದೇವತೆಗಳ ಮೂಲವೆನ್ನಲಾದ ನಿರ್ಗುಣ ನಿರಾಕಾರ ಅದ್ವೈತ ಬ್ರಹ್ಮನಿರಲಿ, ವಿಷ್ಣು, ರಾಮ, ದೇವಿಯೇ ಮೊದಲಾದ ದೇವತಾ ತತ್ತ್ವಗಳಿರಲಿ – ಅಂತಿಮ ಹಂತದಲ್ಲಿ ಸರ್ವವ್ಯಾಪಕವಾದ ಇಂದ್ರಿಯಾತೀತ ತಾತ್ತ್ವಿಕತೆಯನ್ನು ತಲುಪುತ್ತವೆ. ಇವೆಲ್ಲ ದೃಷ್ಟಿಕೋನಗಳ ಕೊನೆಯ ಮಾತೆಂದರೆ, […]

ಸಂತರ ಜಾತಿಯ ಕೇಳಬೇಡ, ಅವರ ಜ್ಞಾನವನು ನೋಡು!

ಮಾಂಸದಂಗಡಿಯ ಹೆಣ್ಣಿನಿಂದ ಆತ್ಮಬೋಧೆ ಪಡೆದ ಕೌಶಿಕ ಎಂಬ ಋಷಿಯೊಬ್ಬನ ಕಥೆ ನಮ್ಮ ಪ್ರಾಚೀನ ಸಾಹಿತ್ಯದಲ್ಲಿ  ಬರುತ್ತದೆ. ಝೆನ್ ಬುದ್ಧಿಸಮ್ ನಲ್ಲಿ ಜನಪ್ರಿಯವಾದ `ಸರಹ’ನ ಕಥೆಯೂ ಇಂಥದ್ದೇ. ಇಲ್ಲಿ ಋಷಿ ಕುಮಾರನೊಬ್ಬನು ಬಾಣದ ಮೊನೆ ತಯಾರಿಸುವ ಹೆಣ್ಣಿನಿಂದ ಬೋಧೆ ಪಡೆಯುತ್ತಾನೆ. ಶಂಕರಾಚಾರ್ಯರು ಚಾಂಡಾಲನಿಂದ ತಾವೇ ಪ್ರತಿಪಾದಿಸುತ್ತಿದ್ದ ಅದ್ವೈತ ತತ್ತ್ವದ ಅನ್ವಯವನ್ನು ಅರಿಯುತ್ತಾರೆ. ನಮ್ಮ ಪರಂಪರೆಯುದ್ದಕ್ಕೂ ಇಂಥಾ ಅಸಂಖ್ಯಾತ ಸಂತರ ಉದಾಹರಣೆಗಳನ್ನು ನಾವು ಕಾಣುತ್ತೇವೆ. ~ ಸಾ.ಹಿರಣ್ಮಯಿ ಬಹುಶಃ ಜಾತಿಯ ವಿಷಯದಲ್ಲಿ ನಡೆಯುವಷ್ಟು ಜಿಜ್ಞಾಸೆ ನಮ್ಮ ದೇಶದಲ್ಲಿ ಇನ್ಯಾವುದರ ಕುರಿತೂ […]

ಮರಳಿ ಯತ್ನವ ಮಾಡು : ಪರಮಹಂಸ ವಚನ ವೇದ

ರಾಮಕೃಷ್ಣ ಪರಮಹಂಸರು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದರಿಂದ ಎಂಥಾ ಕಷ್ಟದ ಕಾರ್ಯವನ್ನೂ ಸಾಧಿಸಬಹುದು ಎಂದು ದೃಷ್ಟಾಂತಗಳ ಮೂಲಕ ಹೇಳುತ್ತಿದ್ದರು. ಸಾಧನೆಯ ಹಾದಿಯಲ್ಲಿ ತೊಡಕುಗಳು ಎದುರಾಯಿತೆಂದು ಶಿಷ್ಯರು ಅವರ ಬಳಿ ಬಂದಾಗೆಲ್ಲ ಅವರು ಛಲ ಬಿಡದೆ ಪ್ರಯತ್ನ ಮುಂದುವರೆಸಿ ಎಂದೇ ಹೇಳುತ್ತಿದ್ದುದು. ಅಂತಹ ಒಂದು ಪ್ರಸಂಗದಲ್ಲಿ ನೀಡಿದ ಬೋಧನೆ ಇಲ್ಲಿದೆ: ಸಮುದ್ರದಲ್ಲಿ ಒಮ್ಮೆ ಮುಳುಗಿದಾಗ ಅಲ್ಲಿ ಮುತ್ತು ಸಿಗದೇ ಇದ್ದರೆ ಅಲ್ಲಿ ಮುತ್ತೇ ಇಲ್ಲವೆಂದು ತಿಳಿಯಬೇಡಿ. ಸಮುದ್ರದಲ್ಲಿ ಲೆಕ್ಕವಿಲ್ಲದಷ್ಟು ಮುತ್ತುಗಳು ಹುದುಗಿವೆ. ಸ್ವಲ್ಪ ಸಾಧನೆಯನ್ನು ಮಾಡಿದ ಮೇಲೆ ಫಲ ದೊರೆಯುವ […]

ಭಗವಂತನಿಗೆಷ್ಟು ಕೋಪ ಬಂದಿರಬೇಕು! : ಒಂದು ದೃಷ್ಟಾಂತ ಕಥೆ

ಒಂದು ಆಶ್ರಮದಲ್ಲಿ ಸಂನ್ಯಾಸಿಯೊಬ್ಬ ಬಹಳ ಕಟ್ಟುನಿಟ್ಟಿನಿಂದ ಜಪಾದಿಗಳನ್ನು ಮಾಡುತ್ತಿದ್ದ. ಪ್ರತಿ ದಿನವೂ ನಿರ್ದಿಷ್ಟ ಸಮಯದಲ್ಲಿ ಜಪಮಾಲೆ ತಿರುಗಿಸುತ್ತ ನಿರ್ದಿಷ್ಟ ಸಂಖ್ಯೆಯ ಜಪ ಮಾಡುತ್ತಿದ್ದ. ಹತ್ತು ವರ್ಷ ಇಷ್ಟು ನಿಷ್ಠೆಯಿಂದ ಸಾಧನೆ ಮಾಡಿದರೂ ಅವನಲ್ಲಿ ಯಾವ ಪರಿವರ್ತನೆಯೂ ಆಗಲಿಲ್ಲ. ಎಲ್ಲರೊಡನೆಯೂ ಜಗಳ ಕಾಯುತ್ತಿದ್ದ. ಕೊಟ್ಟ ಕೆಲಸ ಸರಿಯಾಗಿ ಮಾಡುತ್ತಿರಲಿಲ್ಲ. ವಿಪರೀತ ಸಿಡುಕು ಸ್ವಭಾವ. ಒಂದು ದಿನ ಅವನಿಗೆ ಬುದ್ಧಿ ಕಲಿಸಬೇಕೆಂದು ಇನ್ನೊಬ್ಬ ಸಂನ್ಯಾಸಿ ನಿರ್ಧರಿಸಿದ. ಈತ ಕೋಣೆಯ ಬಾಗಿಲು ಮುಚ್ಚಿ, ಚಿಲಕ ಹಾಕಿಕೊಂಡು ಜಪಕ್ಕೆ ಕುಳಿತ. ಅದೇ ವೇಳೆಗೆ ಆ […]

ಅಲೆಗಳನ್ನು ಸಮಸ್ಯೆ ಎಂದಲ್ಲ, ಸಾಧ್ಯತೆಗಳೆಂದು ಭಾವಿಸಿ…

ಬದುಕಿನಲ್ಲಿ ಯಾವ ಪ್ರಯತ್ನಕ್ಕೂ ಅಂತ್ಯ ಎನ್ನುವುದೊಂದಿಲ್ಲ. ಎಲ್ಲವೂ ಮುಗಿದೇಹೋಯ್ತು ಅಂದುಕೊಳ್ಳುವಾಗಲೇ ಹೊಸ ಸಾಧ್ಯತೆ ನಮಗಾಗಿ ತೆರೆದುಕೊಳ್ಳುತ್ತಿರುತ್ತದೆ. ಕಣ್ಣುಬಿಟ್ಟು ನೋಡುವ ಎಚ್ಚರ ನಮ್ಮಲ್ಲಿ ಇರಬೇಕಷ್ಟೆ.   ಸಮುದ್ರದಲ್ಲಿ ಅಲೆಗಳು ಒಂದಾದಮೇಲೆ ಒಂದು ಏಳುತ್ತಲೇ ಇರುತ್ತವೆ. ಒಂದು ಎದ್ದು ದಡ ಮುಟ್ಟಿ ತೀರಿತು ಎನ್ನುವಾಗ ಮತ್ತೊಂದು ಎದ್ದು ಬರುತ್ತದೆ. ಅದಕ್ಕೆ ದಣಿವೇ ಇಲ್ಲ. ನಾವು ಸಾಮಾನ್ಯವಾಗಿ ಈ ಅಲೆಗಳನ್ನು ಸಮಸ್ಯೆಗಳಿಗೆ ಹೋಲಿಸುತ್ತೇವೆ. ಸಮಸ್ಯೆಗಳು ಮುಗಿಯುವುದೇ ಇಲ್ಲ, ಒಂದು ತೀರಿತು ಎಂದಕೂಡಲೇ ಮತ್ತೊಂದು ಉದ್ಭವವಾಗುತ್ತದೆ ಎಂದು ಗೊಣಗುತ್ತೇವೆ. ಆದರೆ ಯಾವಾಗಲೂ ನಾವೇಕೆ […]

ಬಾವುಲ್ : ಭಕ್ತಿಯಲಿ ಉನ್ಮತ್ತ ಪರಂಪರೆ

ಬಾವುಲ್ ಪಂಗಡ ಅತ್ಯಂತ ಸಂಕೀರ್ಣವಾದುದು. ಇಲ್ಲಿ ಹಲವು ಮೂಲಗಳಿಂದ ಬಂದು ಸೇರಿದ ಜನರಿದ್ದಾರೆ. ತಲೆಮಾರುಗಳ ಹಿಂದೆ ಬಾವುಲ್‍ಪಂಥದತ್ತ ಆಕರ್ಷಿತರಾಗಿ ಬಂದ ಬೇರೆ ಬೇರೆ ಜಾತಿ ಮತಗಳವರು ಸೇರಿ ಈ ವಿಶಿಷ್ಟವಾದ ಪಂಗಡ ಬೆಳೆದುಕೊಂಡಿದೆ. ಇವರ ಸಂಖ್ಯೆ ಬಹಳ ಕಡಿಮೆ ಇರುವುದಾದರೂ ಬಂಗಾಳ ಪ್ರಾಂತ್ಯದಲ್ಲಿ ಬಾವುಲ್‍ಗಳು ಬೀರಿರುವ ಪರಿಣಾಮ ಗಣನೀಯವಾದುದು ~ ಚೇತನಾ ತೀರ್ಥಹಳ್ಳಿ   ಬಾವುಲ್‍ಗಳು ಅಪ್ಪಟ ಮಣ್ಣಿನ ಮಕ್ಕಳು. ದೇಸೀತನ ಇವರಲ್ಲಿ ನೂರಕ್ಕೆ ನೂರು ಮೇಳೈಸಿರುತ್ತದೆ. ಅವರ ನಡೆ ನುಡಿಗಳೆಲ್ಲವೂ ಅತ್ಯಂತ ಪ್ರಾಮಾಣಿಕ, ನೇರ ಮತ್ತು […]

ನನಗೆ ಶಿಷ್ಯರಿಲ್ಲ, ನೀನು ನನ್ನನ್ನು ಗುರುವೆಂದು ಭಾವಿಸಬಹುದು : ರಮಣ ಧಾರೆ

ದೀರ್ಘಕಾಲದವರೆಗೆ ರಮಣ ಮಹರ್ಷಿಗಳ ಜೊತೆ ಇದ್ದು ಅಧ್ಯಾತ್ಮ ಸಾಧನೆ ಮಾಡಿದ ಮೇಜರ್ ಅಲನ್ ಡಬ್ಲ್ಯೂ. ಚಾಡ್ವಿಕ್ ಮತ್ತು ಭಗವಾನ್ ರಮಣ ಮಹರ್ಷಿಗಳ ನಡುವೆ ನಡೆದ ಸಂಭಾಷಣೆಯೊಂದರ ಭಾಗ ಇಲ್ಲಿದೆ. ನನಗೆ ಶಿಷ್ಯರಿಲ್ಲ ಎಂದು ರಮಣರು ಹೇಳುತ್ತಾರೆ. ಆಗ ಚಾಡ್ವಿಕ್’ರಿಗೆ ತಮ್ಮ ಗುರು ಯಾರು ಎಂಬ ಗೊಂದಲ ಉಂಟಾಗುತ್ತದೆ. ಅವರ ಗೊಂದಲವನ್ನು ರಮಣರ ಉತ್ತರ ಪರಿಹರಿಸುತ್ತದೆ. ಚಾಡ್ವಿಕ್ : ತಮಗೆ ಯಾವ ಶಿಷ್ಯಂದಿರೂ ಇಲ್ಲ ಎಂದು ಭಗವಾನರು ಹೇಳುತ್ತಾರಲ್ಲವೆ? ಭಗವಾನ್ : ಹೌದು. ಚಾಡ್ವಿಕ್ : ಆದರೆ ಯಾವುದೇ […]

ಎತ್ತರ ಬೆಳೆದರೆ ಏನು ಬಂತು, ಖರ್ಜೂರದ ಮರದಂತೆ!?

ಲೌಕಿಕ ಜಗತ್ತಿನಲ್ಲಿ ಹಣ ಗಳಿಕೆಯನ್ನೇ ಸಾಧನೆ ಎಂದು ಪರಿಗಣಿಸಲಾಗುತ್ತದೆ. ಅಥವಾ ಗೆಲುವುಗಳನ್ನು. ಯಾವುದೇ ಕ್ಷೇತ್ರದಲ್ಲಿ ಪಡೆಯುವ ಪದಕಗಳೇ ಸಾಧನೆಗಳಾಗುತ್ತವೆ. ಬಹಳ ಬಾರಿ ಇಂಥಾ ಸಾಧಕರು ನೋಡಲಿಕ್ಕಷ್ಟೇ ದೊಡ್ಡ ಮನುಷ್ಯರು. ಇವರಿಂದ ಸಮಾಜಕ್ಕಾಗಲೀ ತಮ್ಮ ಸುತ್ತಲಿನ ಜನಕ್ಕಾಗಲೀ ಏನೂ ಪ್ರಯೋಜನವಿಲ್ಲ. ಪರರ ಕಷ್ಟಕ್ಕೆ ಇವರು ಮಿಡಿಯುವುದಿಲ್ಲ. ಸಂತೈಸುವುದಿಲ್ಲ. ಹಣದ ಮಾತಿರಲಿ, ಕನಿಷ್ಠ ಕಾಳಜಿಯನ್ನೂ ತೋರುವುದಿಲ್ಲ. ಇಂಥ ‘ಸಾಧಕ’ರಿಂದ ಏನು ತಾನೆ ಪ್ರಯೋಜನ? –  ಇದು ಸಂತ ಕಬೀರರು ಕೇಳುವ ಪ್ರಶ್ನೆ.  ಖರ್ಜೂರದ ಮರದ ಉದಾಹರಣೆ ಕೊಟ್ಟು ತಮ್ಮ ದೋಹೆಯಲ್ಲಿ […]