ಗೀತಾಚಾರ್ಯ ಶ್ರೀಕೃಷ್ಣ ಹೇಳಿದ 8 ತಾಮಸ ಗುಣಗಳು

ತಾಮಸ ಗುಣಗಳನ್ನು ಬೆಳೆಸಿಕೊಂಡ ನೀವು ಇಹಕ್ಕೂ ಪರಕ್ಕೂ ಸಲ್ಲದವರಾಗಿಬಿಡುತ್ತೀರಿ. ಆದ್ದರಿಂದ, ನಿಮ್ಮೊಳಗಿನ ತಾಮಸಿಕ ಪ್ರವೃತ್ತಿಯನ್ನು ಗುರುತಿಸಿಕೊಂಡು, ಅದರಿಂದ ಹೊರಬರಲು ಯತ್ನಿಸಿ.

ಈ ಸಂಸಾರ ಮಿಥ್ಯೆಯೇ? : ರಾಮಕೃಷ್ಣ ವಚನವೇದ

ಬಂದು ಹೋಗಲು  ಮಾರ್ಗವಿದೆ.  ಆದರೂ  ಮೀನು ಬೋನಿನಿಂದ ತಪ್ಪಿಸಿಕೊಂಡು ಹೋಗದು. ರೇಷ್ಮೆಹುಳು ತನ್ನನ್ನು ತಾನೇ  ಬಂಧಿಸಿಕೊಂಡು,  ತಾನಾಗಿಯೇ  ಸಾಯುತ್ತದೆ.  ಈ ರೀತಿಯ ಈ ಜಗತ್ತು ಮಿಥ್ಯೆಯಾದದ್ದು, ಅನಿತ್ಯವಾದದ್ದು

ಮನಸ್ಸಿನ ಕನ್ನಡಿ ಸ್ವಚ್ಛವಾಗಿರಬೇಕು : Sufi Corner

“ಮನಸ್ಸಿನ ಕನ್ನಡಿ ಸ್ವಚ್ಛವಾಗಿರಬೇಕು. ಆಗ ನಾನಲ್ಲದೆ ಬೇರೆ ದೇವರಿಲ್ಲ ಎಂಬ ಸತ್ಯವು ಗೋಚರಿಸುತ್ತದೆ. ನಾನು ನೀನೆಂಬ ವ್ಯತ್ಯಾಸವೇ ಇಲ್ಲವಾಗುತ್ತದೆ. ಲೋಕವೇ ನಾನೆಂಬ ಅರಿವಾಗುತ್ತದೆ” ಅನ್ನುತ್ತಾಳೆ ಲಲ್ಲಾ.

ಅಹಂಕಾರದ ಜ್ವರ ಇಳಿಸುವ ವಿದ್ವಾಂಸರ ಸಹವಾಸ : ನೀತಿಶತಕದಿಂದ, ಸುಭಾಷಿತ…

ನಮ್ಮ ವಿದ್ವತ್ತಿನ ಮಟ್ಟವನ್ನು ನಮಗಿಂತಲೂ ಹೆಚ್ಚು ವಿದ್ವಾಂಸರಾದರೊಡನೆ ತುಲನೆ ಮಾಡಿದಾಗ ನಾವೆಷ್ಟು ಚಿಕ್ಕವರು, ನಾವು ಓದುವುದು ಇನ್ನೂ ಇದೆ ಎನ್ನುವ ಅರಿವು ಮೂಡುತ್ತದೆ. ಆ ಅರಿವು ಮುಂದಿನ ಪ್ರಗತಿಗೆ ಪೂರಕವಾಗುತ್ತದೆ : ಭರ್ತೃಹರಿ

ಸಮಯ ವ್ಯರ್ಥ ಮಾಡದಿರೋಣ : ಈ ದಿನದ ಸುಭಾಷಿತ

“ಸಕಲ ಐಶ್ವರ್ಯಗಳನ್ನು ಕೊಟ್ಟರೂ ನಾವು ಒಂದು ಕ್ಷಣವನ್ನು ಕೂಡಾ ಮರಳಿ ಪಡೆಯಲಾರೆವು. ಆದ್ದರಿಂದ, ಸಮಯವನ್ನು ವೃಥಾ ವ್ಯಯ ಮಾಡುವುದು ದೊಡ್ಡ ಪ್ರಮಾದವೇ ಸರಿ” ಅನ್ನುತ್ತದೆ ಸುಭಾಷಿತ.