ಹಾಫಿಜ್’ಗೆ ಭಗವಂತ ಹೇಳಿದ್ದು : ಅರಳಿಮರ POSTER

ಭಗವಂತ ಹೇಳಿದ, “ನಿಮ್ಮ ಬದುಕು ನನ್ನನ್ನು ಸೃಷ್ಟಿಸಿದೆ. ನೀವು ಪ್ರತಿಯೊಬ್ಬರ ಆತ್ಮವೂ ನನ್ನನ್ನು ಪೂರ್ಣಗೊಳಿಸುತ್ತದೆ” ~ ಹಾಫಿಜ್ ಸಕಲ ಜಡ ಚೇತನಗಳನ್ನು ಭಗವಂತನ ಸೃಷ್ಟಿ ಎಂದು ನಂಬುವುದಾದರೆ, ಭಗವಂತನೂ ಈ ಸಮಸ್ತದಿಂದ ರೂಪುಗೊಂಡ ಪರಮಶಕ್ತಿಯಾಗಿದ್ದಾನೆ (ಇಲ್ಲಿ ‘ಆಗಿದ್ದಾನೆ’ ಎನ್ನುತ್ತಿರುವುದು ವಾಕ್ಯಬಳಕೆಯ ರೂಢಿಯಿಂದಷ್ಟೆ. ವಾಸ್ತವದಲ್ಲಿ ಭಗವಂತ ಎಂಬ ಆತ್ಯಂತಿಕ ಶಕ್ತಿಯನ್ನು ಗಂಡು – ಹೆಣ್ಣೆಂದು ನಿರ್ವಚಿಸಲು ಬರುವುದಿಲ್ಲ. ಇದು ಲಿಂಗಾತೀತ ಶಕ್ತಿ).  ಸೃಷ್ಟಿಯ ಪ್ರತಿಯೊಂದು ಜಡ ಚೇತನಗಳೂ ಭಗವಂತನ ಅಸ್ತಿತ್ವದ ತುಣುಕುಗಳೇ. ತುಣುಕು ಅನ್ನುವುದಕ್ಕಿಂತ, ಭಗವಂತನ ಪ್ರತಿರೂಪಗಳೇ… ಅಥವಾ […]

ಬೆಳಗಿನ ಪ್ರಾರ್ಥನೆ : ಮನಸ್ಸು ಮಂಗಳಕರವಾಗಿರಲಿ

ಯತ್ಪ್ರಜ್ಞಾನಮುತ ಚೇತೋ ಧೃತಿಶ್ಚ ಯಜ್ಜ್ಯೋತಿರಂತರಮೃತಂ ಪ್ರಜಾಸು| ಯಸ್ಮಾನ್ನ ಋತೇ ಕಿಂಚನ ಕರ್ಮ ಕ್ರಿಯತೇ ತನ್ಮೇ ಮನಃ ಶಿವಸಂಕಲ್ಪಮಸ್ತು|| ಅರ್ಥ: ಯಾವುದು ತಿಳುವಳಿಕೆಯೋ ಮತ್ತು ಆಲೋಚನೆಯ ಶಕ್ತಿಯೋ, ಯಾವುದು ದೃಢತೆಯಿಂದ ಕೂಡಿದೆಯೋ, ಯಾವುದು ಜನರೊಳಗೆ ಎಂದೂ ಅಳಿಯದ ಬೆಳಕಾಗಿರುವುದೋ, ಯಾವುದನ್ನು ಬಿಟ್ಟು ಯಾರೂ ಯಾವ ಕೆಲಸವನ್ನೂ ಮಾಡಲಾರರೊ ಆ ನನ್ನ ಮನಸ್ಸು ಮಂಗಳಕರವಾದ ಸಂಕಲ್ಪದಿಂದ ಕೂಡಿರಲಿ. ಎಲ್ಲರಿಗೂ ಸದಾ ಸನ್ಮಂಗಳವನ್ನೆ ಬಯಸಲಿ.  ಯೇ ಮೇ ಹೃದಯಂ ಯೇ ಚ ದೇವಾ ಯೇ ಅಂತರಿಕ್ಷಂ ಬಹುಧಾ ಕಲ್ಪಯಂತಿ| ಯೇ ಶ್ರೋತ್ರಂ […]

ನಿಮ್ಮ SQ (spiritual quotient) ಯಾವ ಮಟ್ಟದಲ್ಲಿದೆ?

ಸ್ಪಿರಿಚುವಲ್ ಕೋಶೆಂಟ್ ಅಥವಾ ಎಸ್‍ಕ್ಯೂ, ಐಕ್ಯೂ ಮತ್ತು ಇಕ್ಯೂಗಳಿಗಿಂತ ಬಹಳ ಮೇಲ್ಮಟ್ಟದ್ದು. `ಒಂದು ಕಂಪ್ಯೂಟರಿಗೆ ಐಕ್ಯೂ ಇರುತ್ತದೆ. ಒಂದು ಪ್ರಾಣಿ ಇಕ್ಯೂ ಹೊಂದಿರಬಹುದು. ಹಾಗಿದ್ದ ಮೇಲೆ ಈ ಎರಡಕಿಂತ ಮೇಲ್‍ಮಟ್ಟದವನಾದ ಮನುಷ್ಯನಲ್ಲಿ ಎಸ್‍ಕ್ಯೂ ಇದ್ದಿರಲೇಬೇಕು. ಅದಿಲ್ಲವಾದರೆ ಆತ ಇನ್ನೂ ಆಂತರಿಕವಾಗಿ ಮನುಷ್ಯನಾಗಿ ವಿಕಾಸಗೊಂಡಿಲ್ಲ ಎಂದೇ ಅರ್ಥ’  ಅನ್ನುತ್ತಾನೆ ಮಾರ್ಷಲ್. ಆತನ ಈ ವಿವರಣೆ ನಾವು ಎಸ್‍ಕ್ಯೂ ಬೆಳೆಸಿಕೊಳ್ಳಬೇಕಾದ ಅಗತ್ಯತೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ  ~  ಗಾಯತ್ರಿ ಮನುಷ್ಯನನ್ನು ವೈಚಾರಿಕವಾಗಿ ಚಿಂತಿಸಬಲ್ಲ ಪ್ರಾಣಿ ಎಂದು ಕರೆದ ಅರಿಸ್ಟಾಟಲ್. ಆತನ ಈ […]

ಸಾದಿ ಹೇಳಿದ್ದು… : ಅರಳಿಮರ POSTER

ಪಂಡಿತರೊಡನೆ ವಾಗ್ವಾದಕ್ಕಿಳಿದು ನಿಮ್ಮ ಬುದ್ಧಿವಂತಿಕೆಯ ಪ್ರದರ್ಶನ ಮಾಡುತ್ತಿದ್ದೇವೆ ಅಂದುಕೊಳ್ಳಬೇಡಿ. ವಾಸ್ತವದಲ್ಲಿ ಅವರು ನಿಮ್ಮ ಮೌಢ್ಯಕ್ಕೆ ಮರುಕ ಪಡುತ್ತಿರುತ್ತಾರೆ. ~ ಸಾದಿ ಶಿರಾಜಿ | ಸೂಫಿ ಕವಿ

ಚಿಕ್ಕದೊಂದು ಕದಲುವಿಕೆ ಸಾಕು : ಅರಳಿಮರ POSTER

ಚಿಕ್ಕದೊಂದು ಕದಲುವಿಕೆ ಸಾಕು, ಬಿಂಬ ಕನ್ನಡಿಯಾಚೆ ಹೋಗಲು ~ ಅಲಾವಿಕಾ ಎಲ್ಲ ಸುಖ ದುಃಖಗಳೂ, ಎಲ್ಲ ಘಟನೆಗಳೂ ಕನ್ನಡಿ ಮೇಲಿನ ಬಿಂಬಗಳಷ್ಟೆ. ಯಾವುದೂ ಶಾಶ್ವತವಲ್ಲ. ಪ್ರತಿಯೊಂದೂ ತಾತ್ಕಾಲಿಕ, ಕನ್ನಡಿ ಮೇಲಿನ ಪ್ರತಿಬಿಂಬದಂತೆ. ನಾವು ಅವನ್ನು ಶಾಶ್ವತ ಚಿತ್ರಗಳಂತೆ ಚಿತ್ತ ಭಿತ್ತಿಯ ಮೇಲೆ ತೂಗಿ ಹಾಕಿಕೊಳ್ಳುತ್ತೇವೆ. ಬಂದೊದಗಿದ ದುಃಖ ಶಾಶ್ವತವೋ ಎಂಬಂತೆ ಯಾತನೆ ಪಡುತ್ತೇವೆ. ಸುಖ ಶಾಶ್ವತವೋ ಎಂಬಂತೆ ಮೆರೆದಾಡುತ್ತೇವೆ. ಅಧಿಕಾರ ಶಾಶ್ವತ ಅನಿಸಿಬಿಟ್ಟರೆ, ಅದರ ದುರ್ಬಳಕೆ ಮಾಡುತ್ತೇವೆ. ಅವೆಲ್ಲ ಅದೆಷ್ಟು ಅಳ್ಳಕ ಎಂಬುದು ನಮ್ಮ ಗಮನಕ್ಕೆ ಬರುವುದೇ […]

ಸೂಫಿ ಇಬ್ನ್ ಅರಬಿ ಹೇಳಿದ್ದು : ಅರಳಿಮರ POSTER

ಪ್ರೇಮದ ಕಾರವಾನು ಯಾವ ಹಾದಿ ನಡೆಯುವುದೋ ಅದೇ ನನ್ನ ಧರ್ಮ. ನಾನು ಪ್ರೇಮ ಪಥಿಕ ! ~ ಇಬ್ನ್ ಅರಬಿ ಇದು ಬಹಳ ಸ್ಪಷ್ಟವಿದೆ. ದ್ವೇಷ ಲೋಕವನ್ನು ನಾಶ ಮಾಡುತ್ತದೆ; ಪ್ರೇಮ ಬೆಸೆಯುತ್ತದೆ. ಎಲ್ಲ ಜಡ – ಚೇತನಗಳ ನಡುವೆ, ಜೀವ – ಜೀವಗಳ ನಡುವೆ, ಮನಸ್ಸು – ಆಲೋಚನೆಗಳ ನಡುವೆ, ಆಲೋಚನೆ – ಕೃತಿಗಳ ನಡುವೆ ಸೌಹಾರ್ದವಿದ್ದರೆ ಮಾತ್ರ ಸೃಷ್ಟಿಯ ಸಮತೋಲನ ಸಾಧ್ಯ. ಈ ಸೌಹಾರ್ದದ ಕೀಲಿ ಕೈ ಪ್ರೇಮ.  ಸೂಫಿ ಇಬ್ನ್ ಅರಬಿ ಹೇಳುತ್ತಾನೆ, […]

ಆಯ್ಕೆಯಲ್ಲಿ ಎಚ್ಚರವಿರಬೇಕು : ಅರಳಿಮರ POSTER

‘ನಮ್ಮ ಇರುವಿಕೆಯಂತೆ ಜಗತ್ತು ಇರುವುದು’ ಎನ್ನಲಾಗುತ್ತದೆ. ‘ಜಗತ್ತಿನಂತೆ ನಾವು ಇರುತ್ತೇವೆ’ ಎನ್ನುವುದು ಕೂಡ ಅಷ್ಟೇ ಸತ್ಯ. ಆದರೆ ಈ ಎರಡೂ ಹೇಳಿಕೆಯಲ್ಲಿ, ಮುಖ್ಯವಾಗುವುದು ನಮ್ಮ ಆಯ್ಕೆ. ನಾವು ಸಕಾರಾತ್ಮಕ ಚಿಂತನೆ ಹೊಂದಿದ್ದರೆ, ನಾವು ಧೀರರೂ ಸಹಿಷ್ಣುಗಳೂ ಆಗಿದ್ದರೆ, ನಮ್ಮ ಸುತ್ತಲಿನ ಜಗತ್ತು ಕೂಡಾ ಹಾಗೆಯೇ ಇರುತ್ತದೆ. ನಮ್ಮ ಸುತ್ತಲಿನ ಜನರು ನಮ್ಮ ಪ್ರಭಾವಕ್ಕೆ ಬಂದು, ತಾವೂ ಬದಲಾಗಿ, ‘ನಮ್ಮಂತೆ ಇರುವಿಕೆಯಂತೆ’ ಜಗತ್ತನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. ಅದಕ್ಕೆ ಬದಲಾಗಿ ನಾವು ದುರ್ಬಲರೂ  ಅರಿವುಗೇಡಿಗಳೂ ಆಗಿದ್ದರೆ, ಬಹಳ ಬೇಗ ಜಗತ್ತಿನ […]

ಓದುಗರ ಮೂರು ಪ್ರಶ್ನೆಗಳಿಗೆ ಉತ್ತರ : ಅರಳಿಮರ ಸಂವಾದ

ಅರಳಿಮರ ಫೇಸ್’ಬುಕ್ ಮತ್ತು ವಾಟ್ಸಪ್’ಗಳಲ್ಲಿ ಕೇಳಲಾಗಿದ್ದೆ ಪ್ರಶ್ನೆಗಳಿಗೆ ಉತ್ತರಿಸುವುದು ಕಾರಣಾಂತರಗಳಿಂದ ತಡವಾಗಿದೆ. ಮುಂದಿನ ದಿನಗಳಲ್ಲಿ ಶೀಘ್ರದಲ್ಲೇ ಸ್ಪಂದಿಸಲು ಪ್ರಯತ್ನಿಸುತ್ತೇವೆ. ಓದುಗರ ಪ್ರಶ್ನೆಗಳಲ್ಲಿ ಮೂರನ್ನು ಆಯ್ದು ಅರಳಿಬಳಗದ ಚಿತ್ಕಲಾ ಉತ್ತರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಉಳಿದ ಪ್ರಶ್ನೆಗಳಿಗೂ ಉತ್ತರಿಸಲಾಗುವುದು.  ನಾಗರತ್ನ ಕೊಂಡ್ಲಿ ಅವರ ಪ್ರಶ್ನೆ : ನಾನು ಪ್ರಾಮಾಣಿಕವಾಗಿ ನಮ್ಮ ಊರಿನ ಜನರಿಗೆ ಸಹಾಯ ಮಾಡಲು ನೋಡುತ್ತಿದ್ದೇನೆ. ನನಗೆ ಕೆಲವು ವ್ಯಕ್ತಿಗಳು ಹಾಗೂ ದುಷ್ಟ ಶಕ್ತಿಗಳು ತೊಂದರೆ ಕೊಡುತ್ತಿದ್ದಾರೆ. ಹೇಗೆ ಮಾಡುವುದು? ಏನು ಮಾಡುವುದು ನಾನಂತೂ ಯಾರಿಗೂ ಭಯ […]

ಯುವತಿಯನ್ನು ಕೆಳಗಿಳಿಸದ ಎಕಿಡೊ : ಝೆನ್ ಕಥೆ

ಬೌದ್ಧ ಬಿಕ್ಖುಗಳಾದ ತಾನ್ ಜೆನ್ ಮತ್ತು ಎಕಿಡೋ ಒಟ್ಟಿಗೆ ಝೆನ್ ಕಲಿಯುತ್ತಿದ್ದರು. ಒಮ್ಮೆ ಅವರು ಎಲ್ಲಿಗೋ ಹೋಗುವುದಿತ್ತು. ಹಿಂದಿನ ರಾತ್ರಿ ಸಿಕ್ಕಾಪಟ್ಟೆ ಮಳೆ ಬಂದು ಚಿಕ್ಕ ಹಳ್ಳಗಳೆಲ್ಲ ತುಂಬಿ ರಸ್ತೆ ಮೇಲೆ ಹರಿದಿದ್ದವು. ಸಾಮಾನ್ಯದವರು ರಸ್ತೆ ದಾಟುವುದು ಕಷ್ಟ ಅನ್ನುವ ಪರಿಸ್ಥಿತಿ. ಹೀಗಿರುವಾಗ ತಾನ್ ಜೆನ್ ಮತ್ತು ಎಕಿಡೊ ಸಾಹಸಪಟ್ಟು ನಡೆದುಹೋಗುತ್ತಿದ್ದರು. ಅದೇ ವೇಳೆಗೆ ಹಳ್ಳ ಹರಿಯುತ್ತಿದ್ದ ರಸ್ತೆಯನ್ನು ದಾಟಲಾಗದೆ ಯುವತಿಯೊಬ್ಬಳು ಪರದಾಡುತ್ತಿದ್ದಳು. ಅವಳ ಕಷ್ಟವನ್ನು ನೋಡಲಾಗದೆ ತಾನ್ ಜೆನ್, “ಇರು ಹುಡುಗಿ, ನಾನು ಸಹಾಯ ಮಾಡ್ತೀನಿ” […]

ನಾನೇ ಭಾರತ, ಭಾರತವೇ ನಾನು… : ಅರಳಿಮರ POSTER

“ನಾನೇ ಭಾರತ, ಭಾರತವೇ ನಾನು. ನಾನು ನಡೆದಾಡಿದರೆ ಭಾರತ ನಡೆದಾಡಿದಂತೆ, ಮಾತಾಡಿದರೆ ಭಾರತವೇ ಮಾತಾಡಿದಂತೆ ನನಗೆ ಭಾಸವಾಗುತ್ತದೆ” ಎಂದು ಘೋಷಿಸಿದ್ದರು ಸ್ವಾಮಿ ರಾಮತೀರ್ಥ ಅಪ್ರತಿಮ ಅದ್ವೈತಿಯಾಗಿದ್ದ ರಾಮತೀರ್ಥರು  “ನಾನೇ ಭಾರತ, ಭಾರತವೇ ನಾನು. ನಾನು ನಡೆದಾಡಿದರೆ ಭಾರತ ನಡೆದಾಡಿದಂತೆ, ಮಾತಾಡಿದರೆ ಭಾರತವೇ ಮಾತಾಡಿದಂತೆ ನನಗೆ ಭಾಸವಾಗುತ್ತದೆ” ಎಂದು ಘೋಷಿಸಿದ್ದರು.  ಒಬ್ಬ ವ್ಯಕ್ತಿಯಲ್ಲಿ ಒಂದು ದೇಶವನ್ನು ಕಾಣಲು ಸಾಧ್ಯವಾಗಬೇಕು. ಹೀಗೆ ಪ್ರತಿಯೊಬ್ಬರಲ್ಲೂ ರಾಷ್ಟ್ರವನ್ನೆ ಕಂಡರೆ, ಪರಸ್ಪರ ಸೇವೆಗೈಯುತ್ತ ದೇಶವನ್ನು ಪ್ರಗತಿಯ ಉತ್ತುಂಗಕ್ಕೆ ಕೊಂಡೊಯ್ಯಬಹುದು ಎನ್ನುವುದು ಅವರ ಬೋಧನೆಯ ಸಾರವಾಗಿತ್ತು.