ಕಾಯಕ : ತಾವೋ ಧ್ಯಾನ ~ 7

ಋತುಮಾನ ಮತ್ತು ಕಾಯಕದ ಸ್ವಭಾವ ಅರಿತು ಕಾಯಕಕ್ಕಿಳಿದಾಗ ಅದು ಕಾಯಕವೂ ಹೌದು ಪ್ರೇಮವೂ ಹೌದು ~ ~ ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ ಕಟ್ಟಿಗೆ ಕತ್ತರಿಸುವವನ ಸಂಧಾನ ಋತುಗಳೊಂದಿಗೆ. ಕಟ್ಟಿಗೆ ಸೀಳುವುದು ಅವನಿಗೆ ದುಡಿಮೆಯೂ ಹೌದು, ದುಡಿಮೆ ಅಲ್ಲವೂ ಹೌದು. ಹಿಮ ಸುರಿಯುತ್ತಿರುವಾಗಲೂ ಕಟ್ಟಿಗೆ ಕತ್ತರಿಸುವವನಿಗೆ ಬಿಡುವಿಲ್ಲ. ಅವನು ಕಟ್ಟಿಗೆ ಕತ್ತರಿಸದೇ ಹೋದರೆ, ಅವನು ಮತ್ತು ಅವನ ಮನೆಯವರು ಬೆಚ್ಚಗಿರಲಾರರು ಹಾಗು ಅವನನ್ನು ಅವಲಂಬಿಸಿದವರು ಕೂಡ ಸರಾಗವಾಗಿ ಉಸಿರಾಡಲಾರರು. ಆದರೆ ಕಟ್ಟಿಗೆ ಕತ್ತರಿಸುವವ ತುಂಡು ಗುತ್ತಿಗೆಯವನ […]

ಪ್ರತಿಫಲನ : ತಾವೋ ಧ್ಯಾನ ~ 4

ಪ್ರತಿಬಿಂಬ ಸ್ಷಷ್ಟವಾಗುವಲ್ಲಿ ಚಂದ್ರನ ಶ್ರಮವೂ ಇಲ್ಲ ನೀರಿನ ಪ್ರಯತ್ನವೂ ಇಲ್ಲ. ಹಾಗೆಯೇ ಧ್ಯಾನ, ಸಹಜ ಮತ್ತು ತಕ್ಷಣದ ಲೀಲೆ ~  ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ ನೀರ ಮೇಲೆ ಚಂದ್ರ ಉಸಿರ ಗಮನಿಸುತ್ತ ಕೂಡು ಸರೋವರ ಪ್ರಶಾಂತವಾಗಿದ್ದಾಗ ಚಂದ್ರನ ಬಿಂಬವೂ ಪರಿಪೂರ್ಣ. ಹಾಗೆಯೇ ಪ್ರಶಾಂತ ಮನುಷ್ಯ, ದಿವ್ಯವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುತ್ತಾನೆ. ನಮ್ಮ ಉದ್ವಿಗ್ನತೆ, ಪ್ರಕೃತಿಯ ಸಹಜ ವ್ಯವಹಾರಗಳಲ್ಲಿ ನಿರಂತರ ಹಸ್ತಕ್ಷೇಪ, ಅಷ್ಟೇ ಅಲ್ಲ ಅಂತರಂಗದ ವಹಿವಾಟುಗಳಲ್ಲೂ ‘ನಾನು’ ಮುಂದಾಳಾಗಿ ಎಲ್ಲವನ್ನೂ ನಿಯಂತ್ರಿಸುವುದು ನಮ್ಮ ಪ್ರಶಾಂತತೆಯನ್ನು […]

ಸಂಪ್ರದಾಯವೊಂದು ಅವನತಿಯ ಹಾದಿ ಹಿಡಿದಾಗ…

ಮೂಲ: ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಸಂಪ್ರದಾಯವೊಂದು ಅವನತಿಯ ಹಾದಿ ಹಿಡಿದಾಗ ಕರುಣೆ ಮತ್ತು ನೈತಿಕತೆ ಹುಟ್ಟಿಕೊಳ್ಳುತ್ತವೆ. ಕಲಿಕೆ ಮತ್ತು ಜಾಗರೂಕತೆ ಮೇರೆ ಮೀರುತ್ತಿದ್ದಂತೆಯೇ ಬೂಟಾಟಿಕೆ ಹುಟ್ಟಿಕೊಳ್ಳುತ್ತದೆ. ಒಡೆದ ಮನೆಯಲ್ಲಿ ಮಕ್ಕಳು ಮತ್ತು ತಂದೆ ತಾಯಂದಿರು ಕರ್ತವ್ಯಪರಾಯಣರು. ಛಿದ್ರಗೊಂಡ ಸಮಾಜದ ತುಂಬ ನಂಬಿಕಸ್ತ ಭಕ್ತರ ಮೆರವಣಿಗೆ, ಉರವಣಿಗೆ.

ತಾವೋ ತಿಳಿವು #79 ~ ಪೂರ್ಣವಾಗುವುದೆಂದರೆ ತಾವೋಗೆ ಮರಳುವುದು

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಪೂರ್ಣವಾಗಬೇಕಾದರೆ, ಚೂರುಚೂರಾಗು. ನೇರವಾಗಬೇಕಾದರೆ, ಬಾಗು, ಮಣಿ. ತುಂಬಿಕೊಳ್ಳಬೇಕಾದರೆ, ಖಾಲಿಯಾಗು. ಮತ್ತೆ ಹುಟ್ಟಬೇಕಾದರೆ ಮೂದಲು ಸತ್ತು ನೋಡು ಕಳೆದುಕೊಂಡವ ಶ್ರೀಮಂತ ಕೂಡಿಟ್ಟವ ತಬ್ಬಿಬ್ಬು. ಅಂತೆಯೇ ಸಂತ ಒಂದನ್ನು ಮುಂದಿಟ್ಟುಕೊಂಡು ಇನ್ನೊಂದನ್ನು ಒರೆಗೆ ಹಚ್ಚುತ್ತಾನೆ. ಅವ ಪರದೆಯ ಹಿಂದೆ ಇರುವುದರಿಂದ ಜನ ಅವನ ಬೆಳಕನ್ನು ಮಾತ್ರ ಕಾಣುತ್ತಾರೆ. ಸ್ವಂತ ಸಮರ್ಥನೆಗೆ ಇಳಿಯುವದಿಲ್ಲವಾದ್ದರಿಂದ ತಾನೇ ಸ್ವತಃ ಪ್ರಮಾಣವಾಗಿದ್ದಾನೆ. ತನ್ನ ಬಗ್ಗೆ ಮಾತಾಡುವದಿಲ್ಲವಾದಿದರಿಂದ ಜನರ ದನಿಯಾಗಿದ್ದಾನೆ. ಸ್ಪರ್ಧೆಗಳಿಂದ ದೂರವಿರುವುದರಿಂದ ಸೋಲು […]

ತಾವೋ ತಿಳಿವು #78 ~ ಸಂತನಿಗೆ ಈ ಸೂಕ್ಷ್ಮ ಗೊತ್ತು

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ತಾವೋದಲ್ಲಿ ಒಂದಾದಾಗ ಆಕಾಶ, ಶುಭ್ರ, ತಿಳಿ ಭೂಮಿ, ಸುಭದ್ರ ಚೈತನ್ಯ, ಸೃಷ್ಟಿಶೀಲ ಕಣಿವೆ, ಬಸಿರು ಒಂದನ್ನೊಂದು ಹುಟ್ಟಿಸುತ್ತ ಸತತವಾಗಿ ಹೊಸದಾಗುತ್ತ ಬದುಕು, ಜೀವಂತಿಕೆಯ ತಾಣ ಈ ಬಂಧ ತುಂಡಾದಾಗ ಆಕಾಶ, ಚೂರು ಚೂರು ಭೂಮಿಯಲ್ಲಿ ಬಿರುಕು ಚೈತನ್ಯ ನಿರ್ವೀರ್ಯ ಮತ್ತು ಕಣಿವೆ, ಬರಡು. ಸಂತನಿಗೆ ಈ ಸೂಕ್ಷ್ಮ ಗೊತ್ತು ಅಂತೆಯೇ ಸೃಷ್ಟಿಯ ಬಗ್ಗೆ ಅವನಿಗೆ ಅಪಾರ ಅಂತಃಕರಣ ವಿನಮ್ರತೆಯತ್ತ ಅವನ ಸಾಧನೆ ರತ್ನದಂತೆ ಹೊಳೆಯುವದಕ್ಕಿಂತ […]

ತಾವೋ ತಿಳಿವು #76 ~ ತಾವೋ ರುಚಿ ನಾಲಿಗೆಗೆ ಸಿಕ್ಕುವುದೇ ಇಲ್ಲ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಅಗೋಚರ ತಾವೋ ಕಣ್ಣಿಗೆ ಕಟ್ಚಿಕೊಂಡಾಗ ಜಗತ್ತು ಮೊಣಕಾಲೂರುವುದು. ಇಲ್ಲಿ ಭಯಕ್ಕೆ ಜಾಗವಿಲ್ಲ ಅಶಾಂತಿಗೆ ನೆಲೆ ಇಲ್ಲ ಆತಂಕಕ್ಕೆ ಕಾರಣವಿಲ್ಲ. ಹಾಯ್ದು ಹೋಗುವ ಪ್ರವಾಸಿಗರಿಗೆ ಏರಿಳಿತದ ಹಾಡು ಇಷ್ಟ ರುಚಿ ರುಚಿಯಾದ ಊಟ ಪಂಚಪ್ರಾಣ. ಆದರೆ ತಾವೋ, ಪಕ್ಕಾ ಮಂದ್ರ ಸ್ಥಾಯಿ ರುಚಿ ನಾಲಿಗೆಗೆ ಸಿಕ್ಕುವುದೇ ಇಲ್ಲ. ಕಣ್ಣಿಗೆ ಕಾಣಿಸದು, ಕಿವಿಗೆ ಕೇಳಿಸದು ಬಳಸಿದರೆ ಮಾತ್ರ, ತೀರದು ಉಕ್ಕಿ ಉಕ್ಕಿ ಹರಿಯುವುದು

ತಾವೋ ತಿಳಿವು #74 ~ ಇರದಿರುವುದೇ ಇರುವುದರ ಮಹಾಮಾಯಿ

ಮೂಲ : ಲಾವೋ ತ್ಸು | ಮರುನಿರೂಪಣೆ : ಚಿದಂಬರ ನರೇಂದ್ರ ಮರಳುವುದೇ ತಾವೋ ಅರಳುವ ರೀತಿ, ಬಿಟ್ಟುಕೊಡುವುದೇ ತಾವೋ ಆಕ್ರಮಣದ ನೀತಿ. ಇರುವುದು ಎಲ್ಲದರ ತಂದೆ ತಾಯಿ. ಇರದಿರುವುದೇ ಇರುವುದರ ಮಹಾಮಾಯಿ.

ತಾವೋ ತಿಳಿವು #72 ~ ಪ್ರಯತ್ನ ಯಾವಾಗಲೂ ರಹಸ್ಯವಾಗಿರಲಿ…

ಮೂಲ : ಲಾವೋ ತ್ಸು | ಮರುನಿರೂಪಣೆ : ಚಿದಂಬರ ನರೇಂದ್ರ ಕುಗ್ಗಿಸಿ ಹಿಡಿಯಾಗಿಸಬೇಕೆಂದರೆ ಮೊದಲು ಹಿಗ್ಗಿ, ಬೆಳೆದು, ವಿಸ್ತಾರವಾಗಲಿ. ಬಾಡಿ, ಬಿದ್ದು ನಾಶವಾಗಬೇಕೆಂದರೆ ಮೊದಲು ಬೆಳೆದು ಅರಳಿ, ಹೂವಾಗಲಿ. ಬಯಸಿ ಗೆದ್ದು, ಕೈವಶವಾಗಬೇಕೆಂದರೆ ಮೊದಲು, ಸೋತು, ಕರಗಿ, ಶರಣಾಗಲಿ. ಇದೇ ಸೂಕ್ಷ್ಮ ತಾವೋ ತಿಳಿವು. ವಿನಯ ಕಠೋರತೆಯ ಮೇಲೆ ಸವಾರಿ ಮಾಡಿದರೆ ನಿಧಾನ, ವೇಗವನ್ನು ಹಿಂದೆ ಹಾಕುತ್ತದೆ. ಪ್ರಯತ್ನ ಯಾವಾಗಲೂ ರಹಸ್ಯವಾಗಿರಲಿ ಬೆಳೆದ ಫಸಲು ಮಾತ್ರ ಜನರಿಗೆ ಕಾಣಿಸಲಿ.

ತಾವೋ ತಿಳಿವು #70 ~ ಏನನ್ನೂ ಮಾಡದಿದ್ದಾಗ ಏನೂ ಮಾಡಲು ಉಳಿಯುವುದಿಲ್ಲ

ಮೂಲ : ಲಾವೋ ತ್ಸು | ಮರುನಿರೂಪಣೆ : ಚಿದಂಬರ ನರೇಂದ್ರ ಜ್ಞಾನದ ಹಾದಿ ಹಿಡಿದವ ಪ್ರತಿದಿನ ಗಳಿಸುತ್ತ ಹೋಗುತ್ತಾನೆ. ಆದರೆ ತಾವೋ ಮಾರ್ಗದಲ್ಲಿ ಪ್ರತಿಹೆಜ್ಜೆ ಇಟ್ಟಾಗಲೂ ಏನಾದರೊಂದನ್ನು ಕಳೆದುಕೊಳ್ಳುತ್ತೇವೆ. ಈ ನಷ್ಟ ಯಾವ ಮಟ್ಟ ಮುಟ್ಟುತ್ತದೆಯೆಂದರೆ ಯಾವದೂ ನಮ್ಮ ಕೈಲಾಗುವುದಿಲ್ಲ. ಏನನ್ನೂ ಮಾಡದಿದ್ದಾಗ ಏನೂ ಮಾಡಲು ಉಳಿಯುವುದಿಲ್ಲ. ‘ಸಂಕೋಚ’ ಸೋಲುತ್ತದೆ ಅನಿಸಿದರೂ ‘ನಿಸ್ಸಂಕೋಚ’ ಸೋತಿದ್ದೇ ಹೆಚ್ಚು.

ತಾವೋ ತಿಳಿವು #66 ~ ಮಹಾವೃಕ್ಷ ಕೂಡ, ಮೊಳಕೆಯೊಡೆಯುವುದು ಪುಟ್ಚ ಬೀಜದಿಂದಲೇ…

ಮೂಲ : ಲಾವೋ ತ್ಸು | ಮರುನಿರೂಪಣೆ : ಚಿದಂಬರ ನರೇಂದ್ರ ಬೇರು ಬಿಟ್ಟಿರುವುದನ್ನ, ಸಲಹುವುದು ಸುಲಭ. ಹೊಸ ತಪ್ಪುಗಳನ್ನ, ತಿದ್ದುವುದು ಸುಲಭ. ಗಡುಸಾಗಿರುವುದನ್ನ, ಮುರಿಯುವುದು ಸುಲಭ. ಧೂಳಾದರೆ, ಗಾಳಿಯಲ್ಲಿ ಹರಿಬಿಡುವುದು ಸುಲಭ. ಅವತಾರಕ್ಕಿಂತ ಮುಂಚೆಯೇ ಅನಾಹುತ ಗುರುತಿಸು. ಹುಟ್ಟುವುದಕ್ಕಿಂತ ಮೊದಲೇ ತೊಟ್ಚಿಲು ಕಟ್ಚಿಸು. ಮಹಾವೃಕ್ಷ ಕೂಡ, ಮೊಳಕೆಯೊಡೆಯುವುದು ಪುಟ್ಚ ಬೀಜದಿಂದಲೇ. ಸಣ್ಣ ಹೆಜ್ಜೆ ಎತ್ತಿಟ್ಟಾಗಲೇ ಜೈತ್ರಯಾತ್ರೆಯ ಶುರುವಾತು. ದುಡುಕಿದವ ಎಡವುತ್ತಾನೆ. ಕೈಚಾಚಿದವ ಕಳೆದುಕೊಳ್ಳುತ್ತಾನೆ. ಅಂತೆಯೇ ಸಂತ ಮಾಗುವ ತನಕ ಕಾಯುತ್ತಾನೆ. ಶುರುವಿನಲ್ಲಿ ಇದ್ದ ಸಮಾಧಾನ ಕೊನೆಯವರೆಗೂ […]