ಚಾಮ್: ಟಿಬೆಟ್ಟಿನ ನರ್ತನ ಧ್ಯಾನ

ನರ್ತನವು ಕೂಡಾ ಧ್ಯಾನ – ತಂತ್ರದ ಭಾಗವಾಗಿದೆ. ಬೌದ್ಧ ಧರ್ಮೀಯರು ಆಚರಿಸುವ ನರ್ತನ ಧ್ಯಾನ ತಂತ್ರ ‘ಚಾಮ್’ ಬಗ್ಗೆ ಕಿರಿ ಮಾಹಿತಿ ಇಲ್ಲಿದೆ…. ನಮ್ಮ ತಟ್ಟೀರಾಯನನ್ನು ಮೀರಿಸುವಂಥ ಮುಖವಾಡಗಳು. ತಣ್ಣಗೆ ಸಾಗುತ್ತಲೇ ಭೀಕರ ಎನ್ನಿಸುವ ಆಂಗಿಕ ಚಲನೆ. ಹಿಮ್ಮೇಳದಲ್ಲಿ ಪುನರಾವರ್ತಿತ ಮಂತ್ರದ ಗುಂಗು. ಬೆಳ್ಳನೆ ಹಿಮ ರಾಶಿಯ ಹಿನ್ನೆಲೆಯಲ್ಲಿ ಗಾಢ ಬಣ್ಣಗಳ ದಟ್ಟಣೆ. ಈ ಎಲ್ಲವನ್ನು ಒಳಗೊಂಡಿರುತ್ತದೆ `ಚಾಮ್’ ನೃತ್ಯ. ವಾಸ್ತವದಲ್ಲಿ ಚಾಮ್ ಅಂದರೇನೇ ನೃತ್ಯ, ಟಿಬೆಟನ್ ಭಾಷೆಯಲ್ಲಿ. ಇದು ಬೌದ್ಧ ಆಚರಣೆಗಳಲ್ಲಿ ಮಹತ್ವದ ಪಾತ್ರ ಹೊಂದಿರುವಂಥದ್ದು. […]

ಕುಣಿದು ಕರೆದರೆ ಬಾರದಿರುವನೇ ಭಗವಂತ!?

ಭಗವಂತ ಬಯಲಿನಲ್ಲಿರುತ್ತಾನೆ. ಸ್ವಾತಂತ್ರ್ಯದಲ್ಲಿರುತ್ತಾನೆ. ನಗುವಿನಲ್ಲಿ, ಸಂಭ್ರಮದಲ್ಲಿ, ಪ್ರೇಮದಲ್ಲಿ ನೆಲೆಗೊಂಡಿರುತ್ತಾನೆ. ಇಂಥಾ ಅವ್ಯಕ್ತ ಭಗವಂತನ ಇರುವಿಕೆಯ ಅನುಭೂತಿ ಪಡೆಯುವ ಬಗೆಗಳಲ್ಲಿ ನರ್ತನವೂ ಒಂದು ~ ಆನಂದಪೂರ್ಣ ಕೌನ್ ಕಹ್‍ತೇ ಹೈ ಭಗವಾನ್ ಆತೇ ನಹೀ | ತುಮ್ ಮೀರಾ ಕೆ ಜೈಸೆ ಬುಲಾತೇ ನಹೀ || ಎಂದು ಶುರುವಾಗುವ ಭಜನೆಯೊಂದು – ಕೌನ್ ಕಹ್‍ತೇ ಹೈ ಭಗವಾನ್ ನಾಚ್ತೇ ನಹೀ | ಗೋಪಿಯೋಂ ಕಿ ತರಹ್ ತುಮ್ ನಚಾತೇ ನಹೀ || ಎಂಬ ಸಾಲುಗಳೊಂದಿಗೆ ಮುಕ್ತಾಯವಾಗುತ್ತದೆ. `ಮೀರಾಳ ತರಹ […]

ನಾಲ್ಕು ಹಂತಗಳಲ್ಲಿ ಧ್ಯಾನ ಮಾಡಲು ಕಲಿಯಿರಿ

ಮಾನಸಿಕ ನೆಮ್ಮದಿಗೆ, ದೃಢತೆಗೆ, ಧೈರ್ಯಸಾಧನೆ ಮತ್ತು ಏಕಾಗ್ರತೆ ಸಿದ್ಧಿಗೂ ಧ್ಯಾನದ ಅಭ್ಯಾಸ ಅತ್ಯಂತ ಲಾಭದಾಯಕ. ಧ್ಯಾನ ಮಾಡಲು ಕಲಿಯುವುದು ಕುಡ ಬಹಳ ಸುಲಭ. ಕೇವಲ 4 ಹಂತಗಳಲ್ಲಿ ಇದನ್ನು ಕರಗತ ಮಾಡಿಕೊಳ್ಳಬಹುದು. ಮುಖ್ಯವೆಂದರೆ, ನಮ್ಮಲ್ಲಿ ಧ್ಯಾನದ ಲಾಭಗಳ ಬಗ್ಗೆ ತಿಳಿದಿರಬೇಕು, ಮನಸಿನಲ್ಲಿ ಅದರ ಬಗ್ಗೆ ದೃಢನಿಶ್ಚಯವಿರಬೇಕು. ~ ಚಿತ್ಕಲಾ ದೇಹವನ್ನು ಅಣಿಗೊಳಿಸುವುದು ಸರಿಯಾಗಿ, ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದೆ ಹೋದರೆ ಧ್ಯಾನದಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ದೇಹದ ಭಂಗಿಯ ಅಡಚಣೆಗಳೇ ಏಕಾಗ್ರತೆಗೆ ಭಂಗ ತರುವ ಸಾಧ್ಯತೆಗಳೂ ಇರುತ್ತವೆ. […]

ಪ್ರೇಮಿಸುವುದು : ತಾವೋ ಧ್ಯಾನ ~ 16

ಲೈಂಗಿಕತೆಯನ್ನು ಹತೋಟಿಗೆ,  ನಮ್ಮ ಅನುಕೂಲಕ್ಕೆ, ಸ್ವಾರ್ಥಕ್ಕೆ, ದುರುಪಯೋಗಕ್ಕೆ ಬಳಸುವುದು ಸಾಧುವಲ್ಲ. ಲೈಂಗಿಕತೆ ನಮ್ಮ ವೈಯಕ್ತಿಕ ಒತ್ತಡಗಳಿಗೆ, ಭ್ರಮೆಗಳಿಗೆ ವೇದಿಕೆಯಾಗುವುದೂ ಸಾಧ್ಯವಿಲ್ಲ  ~ ಡೆನ್ ಮಿಂಗ್ ದಾವೋ |  ಚಿದಂಬರ ನರೇಂದ್ರ ನಾನು ಪ್ರೀತಿಯೊಡನೆ ಒಂದಾಗಿಬಿಟ್ಟಿದ್ದೇನೆ. ಕಾಮ, ಈಗ ನನ್ನನ್ನು ಕಾಡುವುದಿಲ್ಲ ಎಂದೆಯಲ್ಲಾ, ಇದು ತುಂಬಾ ಅಪಾಯಕಾರಿ ಹೇಳಿಕೆ. ನನ್ನ ಪ್ರೇಮವೂ ಹಾಗೇ ಎಂದು ನಂಬಬೇಡ. ಮುಂದೊಂದು ದಿನ ನೀನು ಹಿಂದೆ ಹೇಗೆ ಪ್ರೇಮಿಸುತ್ತಿದ್ದೆ ಎಂಬ ಚಿತ್ರ ನೋಡಿದೆಯಾದರೆ ನಿನಗೆ, ನಿನ್ನ ಬಗ್ಗೆಯೇ ಅಸಹ್ಯವಾಗಬಹುದು. ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲೂ […]

ಧ್ಯಾನ : ಮೌನವಾಗಿರುವುದು ಎಂದರೆ ನಿಶ್ಶಬ್ದವಾಗಿರುವುದಷ್ಟೇ ಅಲ್ಲ….

ಬಾಯಿಯಿಂದ ಹೊರಡುವ ಮಾತು ಸಶಬ್ದವಾಗಿ ಹೊರಗಿನ ಜಗತ್ತನ್ನು ತಲುಪುತ್ತದೆ. ಅದು ಮೆದುಳಿನಲ್ಲಿ ರೂಪುಗೊಂಡು ಗಂಟಲಲ್ಲಿ ಹುಟ್ಟಿ, ಗಾಳಿಯಲ್ಲಿ ಲೀನವಾಗುತ್ತದೆ. ಆದರೆ ಅಂತರಂಗದಲ್ಲಿ ಹುಟ್ಟಿಕೊಳ್ಳುವ ಶಬ್ದವಿಲ್ಲದ ಮಾತು ಹೊರಗೆ ಹೋಗಲು ದಾರಿಯಿಲ್ಲ. ಅದು ನಮ್ಮ ಹೃದಯದಲ್ಲೇ ಢಿಕ್ಕಿ ಹೊಡೆಯುತ್ತಾ, ಹೊರಹೋಗುವ ದಾರಿ ಕಾಣದೆ ನಮ್ಮ ವರ್ತನೆಯ ಮೂಲಕ ಹೊರಗೆ ಪ್ರಕಟಗೊಳ್ಳಲು ಕಾತರಿಸುತ್ತಾ ಇರುತ್ತದೆ. ಪರಿಣಾಮವಾಗಿ ನಾವು ಒಳಗೊಳಗೇ ಢಿಕ್ಕಿ ಹೊಡೆದು ಜರ್ಝರಿತವಾದ ಮಾತುಗಳ ಉದ್ವೇಗಕ್ಕೆ ತಕ್ಕಂತೆ ಹೆಜ್ಜೆ ಹಾಕತೊಡಗುತ್ತೇವೆ ~ ಚಿತ್ಕಲಾ ಒತ್ತಡದಲ್ಲಿದ್ದೀರಾ? ಗೊಂದಲದಲ್ಲಿ ಮುಳುಗಿದ್ದೀರಾ? ಚಿಂತೆಗಳು ಕಾಡುತ್ತಿವೆಯೇ? […]

ಅಡುಗೆ ಮಾಡುವುದೂ ಒಂದು ಧ್ಯಾನ!

ಸಂತನಾದವನು ಮಾಡುವ ಅಡುಗೆ ರುಚ್ಚಿಕಟ್ಟಾಗಿ ಇದ್ದೇ ಇರುತ್ತದೆ ಎಂದಿದ್ದರು ಸ್ವಾಮಿ ವಿವೇಕಾನಂದರು. `ಒಳ್ಳೆಯ ಮನಸ್ಸುಳ್ಳವರು ಮಾಡುವ ಅಡುಗೆ ರುಚಿಕರವಾಗಿ ಇದ್ದೇ ಇರುತ್ತದೆ. ಸಂತರ ಮನಸ್ಸು ನಿಷ್ಕಲ್ಮಷವಾಗಿರುತ್ತದೆಯಾದ್ದರಿಂದ ಅದು ಚೆನ್ನಾಗಿರುತ್ತದೆ ಎನ್ನುವುದರಲ್ಲಿ ಸಂದೇಹವೇನು?’ ಅನ್ನೋದು ಅವರ ವಿವರಣೆ! ~ ಗಾಯತ್ರಿ ಅಡುಗೆ ಮಾಡುವುದು ಯಾರೊಬ್ಬರ ಸೊತ್ತಾಗಲೀ ಕರ್ತವ್ಯವಾಗಲೀ ಅಲ್ಲ. ಯಾರಾದರೂ ಆಪ್ತರನ್ನು ಮನೆಗೆ ಕರೆಯುವಾಗ `ಊಟಕ್ಕೆ ಬನ್ನಿ’ ಅಂತ ಹೇಳುತ್ತೇವೆ. ಹಾಗೆ ಆಪ್ತರಾದವರು ಮನೆಗೆ ಬಂದು ಊಟಕ್ಕೆ ನಿಲ್ಲದೆ ಹೋದರೆ ಬೇಜಾರು ಮಾಡಿಕೊಳ್ತೇವೆ. ಇಲ್ಲಿ ಊಟ ಒಂದು ಸಂಕೇತ […]

ಧ್ಯಾನವೆಂದರೆ ಸ್ವಯಂನ ಹುಡುಕಾಟದ ಪ್ರಕ್ರಿಯೆ….

ಏನು ಹುಡುಕಿದರೆ ತೃಪ್ತಿಯಾಗುವುದು, ಅಭಾವ ಕಳೆಯುವುದು, ಯಾವುದು ಸಿಕ್ಕರೆ ಶಾಂತಿ ಸಿಗುವುದು ಎಂದು ಹುಡುಕಾಡುತ್ತಿದ್ದೀರಿ. ಕೊನೆಯಲ್ಲಿ ನಿಮಗೆ ಗೊತ್ತಾಗುತ್ತದೆ, ಯಾವ ಮರೀಚಿಕೆಯ ಬೆನ್ನು ಹತ್ತಿ ನೀವು ಓಡುತ್ತಿದ್ದಿರೋ ಅದು ಯಾವಾಗಿಂದಲೂ ನಿಮ್ಮೊಳಗೆಯೇ ಇದೆಯೆಂದು… ನೀವು ತಪ್ಪು ಜಾಗದಲ್ಲಿ ಹುಡುಕುತ್ತಿದ್ದಿರೆಂದು. ನಿಮಗೆ ಏನಾದರೂ ಅಭಾವ ಉಂಟಾದಾಗ- ಅದು ಏನೇ ಆಗಿರಲಿ, ಆ ಅಭಾವವನ್ನು ತುಂಬಿಕೊಳ್ಳಲು ಹುಡುಕಾಟ ಆರಂಭವಾಗುತ್ತದೆ. ಧ್ಯಾನವು ಪರಿಪಕ್ವಗೊಂಡಾಗ ನಿಮಗೆ ನೀವು ಹುಡುಕುತ್ತಿದ್ದುದು ನಿಮ್ಮನ್ನೇ ಎನ್ನುವ ತಿಳಿವು ಉಂಟಾಗುತ್ತದೆ. ಅಷ್ಟೇ ಅಲ್ಲ, ನೀವು ಪರಿಪೂರ್ಣರೆಂದೂ ನಿಮ್ಮಲ್ಲಿ ಲವಲೇಷದಷ್ಟೂ […]

ಧ್ಯಾನ ಮಾಡಲು ಕಲಿಯಿರಿ: ಕೆಲಸದ ಒತ್ತಡ ನಿವಾರಣೆಗೆ #3  ~ ಮ್ಯೂಸಿಕ್ ಮೆಡಿಟೇಶನ್

ವಿಶ್ರಾಂತಿ ಇಲ್ಲದೆ, ಮಿತಿಮೀರಿದ ಒತ್ತಡದಲ್ಲಿ ಕೆಲಸ ಮಾಡುವುದರಿಂದ ಉಂಟಾಗುವ ಸಮಸ್ಯೆಗಳನ್ನು ನಾವು ಬಲ್ಲೆವು. ಅದನ್ನು ಪರಿಹರಿಸುವ ನಿಟ್ಟಿನಲ್ಲಿ ನಿದ್ರಾ ಧ್ಯಾನ ಮತ್ತು ನರ್ತನ ಧ್ಯಾನ ವಿಧಾನಗಳನ್ನು ಹಿಂದಿನ ಸಂಚಿಕೆಗಳಲ್ಲಿ ನೋಡಿದ್ದೀರಿ. ಈ ಸಂಚಿಕೆಯಲ್ಲಿ ಸಂಗೀತ ಧ್ಯಾನ ವಿಧಾನ ಅಥವಾ ಮ್ಯೂಸಿಕ್ ಮೆಡಿಟೇಶನ್ ಬಗ್ಗೆ ತಿಳಿಯೋಣ. ಸಂಗೀತ ಯಾವುದೇ ಮಾನಸಿಕ ಸಮಸ್ಯೆಗೆ ಅತ್ಯದ್ಭುತ ಚಿಕಿತ್ಸೆ ನೀಡುತ್ತದೆ. ಎಷ್ಟೋ ಬಗೆಯ ಮ್ಯೂಸಿಕ್ ಥೆರಪಿಗಳೂ ನಮ್ಮ ನಡುವೆ ಚಾಲ್ತಿಯಲ್ಲಿದೆ. ಆದರೆ ಚಿಕಿತ್ಸೆ ಹೊರಗಿನ ಹಸ್ತಕ್ಷೇಪವಾಯಿತು. ಅದು ಅವಲಂಬನೆಯನ್ನು ಬೇಡುತ್ತದೆ. ಆದರೆ ಧ್ಯಾನ […]